ಸುದ್ದಿ ಕನ್ನಡ ವಾರ್ತೆ
ಬಾಜಾರಕುಣಂಗ ಗ್ರಾಮ ಪಂಚಾಯತಿ ಯ ಬೊಂಡೇಲಿ ಗ್ರಾಮದಲ್ಲಿ ನಡೆಯುತ್ತಿರುವ ದತ್ತಾತ್ರೇಯ ಮೂರ್ತಿ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಉತ್ತರ ಕನ್ನಡ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆಗಮಿಸಿ ದೇವರ ದರ್ಶನ ಪಡೆದರು, ದಿನಾಂಕ 8, 9 ಮತ್ತು 10 ಏಪ್ರಿಲ್ ಮೂರು ದಿನಗಳ ನಡೆಯುತ್ತಿರುವ ದತ್ತಾತ್ರೇಯ ಮೂರ್ತಿ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ದಿನದಂದು ಜೊಯಿಡಾ – ಹಳಿಯಾಳ ಮಾಜಿ ಶಾಸಕರಾದ ಸುನಿಲ್ ಹೆಗಡೆ ಆಗಮಿಸಿ ದರ್ಶನ ಪಡೆದರು,
ಸಂಸದರು ಅದೆ ದಿನದಂದು ಗೋವಾ ರಾಜ್ಯದ ಮೂಲಕ ಆಗಮಿಸಿ ದತ್ತಾತ್ರೇಯ ದರ್ಶನ ಪಡೆದು ಮಾತನಾಡಿ ಇಂಥ ಒಂದು ಹಳ್ಳಿಯಲ್ಲಿ ದತ್ತಾತ್ರೇಯ ದೇವಸ್ಥಾನ ಆಗಿದ್ದು ತುಂಬ ಖುಷಿಯಾಗಿದೆ ಗೋವಾ ಗಡಿಯಿಂದ ಕಿರವತ್ತಿ ರಸ್ತೆ ಹಾಗೂ ಡಿಗ್ಗಿ – ಕ್ಯಾಸಲಾರಾಕ್ ರಸ್ತೆ ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತೇನೆ ಇಲ್ಲಿ ಜನರು ಪಡಿತರ ತರುವುದು ತುಂಬಾ ಸಮಸ್ಯೆ ಯಾಗುತ್ತಿದೆ ದೂರದ ತೆರಾಳಿಗೆ – ಹೋಗಿ ಪಡಿತರ ತರಬೇಕು ಅದಕ್ಕೆ ತಕ್ಷಣ ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರು ಮಾಡಲು ಕ್ರಮ ಕೈಗೊಳ್ಳುತ್ತೇನೆಂದು ಭರವಸೆ ನೀಡಿದರು, BSNL ನೆಟ್ವರ್ಕ್ ಸಮಸ್ಯೆ ಶೀಘ್ರದಲ್ಲಿ ಬಗೆಹರಿಸುತ್ತೇನೆ ಹಾಗೂ ಸದ್ಯದಲ್ಲಿಯೇ ಬಂದು ಕಾಳಿ ಉಗಮ ಸ್ಥಾನದಲ್ಲಿ ಪೂಜೆ ನೆರವೇರಿಸುತ್ತೇನೆಂದು ಹೇಳಿದರು ನಂತರ ಗೌಳಾದೇವಿ ದೇವಸ್ಥಾಕ್ಕೆ ಬೇಟೆ ನೀಡಿ ದೇವಿ ದರ್ಶನ ಪಡೆದರು.
ಈ ಸಂಧರ್ಭದಲ್ಲಿ ದತ್ತಾತ್ರೇಯ ಟ್ರಸ್ಟ್ ಕಮಿಟಿಯ ಅಧ್ಯಕ್ಷ ದಯಾನಂದ ಮಿರಾಶಿ, ಪ್ರಕಾಶ್ ಮಿರಾಶಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಜಿತ ಮಿರಾಶಿ, ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾಜಿ ಗೋಸಾವಿ, ಸಂಜಯ್ ಮಿರಾಶಿ, , ಉತ್ತಮ ಮಿರಾಶಿ, ಅಶೋಕ್ ಮಿರಾಶಿ, ರಾಹುಲ್ ಮಿರಾಶಿ, ಸಂತೋಷ ವೆಲಿಪ್ ವಿಷ್ಣು ಮಿರಾಶಿ, ಪ್ರದೀಪ ಮಿರಾಶಿ, ದಿನೇಶ ಮಿರಾಶಿ ಇತರರು ಇದ್ದರು.
