ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಅನಗೋಡ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಷ್ಟಬಂಧ ಮಹೋತ್ಸವದ ಎರಡನೇ ದಿನ ವಿವಿಧ ಕಾರ್ಯಕ್ರಮಗಳು ನಡೆದವು.
ಗಣಪತಿ ಭಟ್ಟಹಿರೇಗೋಕರ್ಣ ಅವರ ಮಾರ್ಗದರ್ಶನ ಹಾಗೂ ವೇ.ಗಣಪತಿ ಭಟ್ಟ ಕೊರಗಿ ಅವರ ಪೌರೋಹಿತ್ಯದಲ್ಲಿ ಅಗ್ನಿಸಂಸ್ಕಾರ, ಸ್ಥಾನ ಶುದ್ದಿವಹವನ, ಪೂಜಾಹವನ, ಗಣಪತ್ಯಥರ್ವಶಿರ್ಷ ಹವನ, ಶ್ರೀಸೂಕ್ತ, ಪುರುಷಸೂಕ್ತ, ಪಾರಾಯಣ, ಮಂಡಲಪೂಜೆ, ಪರಿಹವನ, ಪ್ರತಿಷ್ಠಾಪೂರ್ವಾಂಗ ಹವನ, ಅಷ್ಟಾವಧಾನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಾತೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಪ್ರಭಾತ ಭಟ್ಟ ಹಾರ್ಮೋನಿಯಂ ಹಾಗೂ ಅನಂತ ಯಲ್ಲಾಪುರಕರ ತಬಲಾ ಸಾಥ್ ನೀಡಿದರು. ಪ್ರತೀಕ್ಷಾ ನರಸಿಂಹ ಗಾಂವ್ಕರ ವಡಗಿರಪಾಲ ಕೊಳಲು ವಾದನದೊಂದಿಗೆ ಗಮನ ಸೆಳೆದರು.
