Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಶ್ರೇಯಾ ಗಾಂವ್ಕಾರ್ ಕೋಲಾರದ ಕಾಲೇಜಿ ನಲ್ಲಿ ಪ್ರಥಮ ಪಿ ಯು ಸಿ ಯಲ್ಲಿ 600ಕ್ಕೆ 586 ಅಂಕ ಗಳಿಸಿ (97.66) ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ .

Banner Ad

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ದ ಕೇದಾಳಿಯ ಶ್ರೇಯಾ ಕೋಲಾರದ ಮಹಿಳಾ ಸಮಾಜದ ಕಾಲೇಜಿನಲ್ಲಿ ಮೊದಲನೇ ವರ್ಷದ ಪಿ ಯು ಸಿ (E B A S E) ವಾಣಿಜ್ಯ ವಿಭಾಗ ದಲ್ಲಿ ಓದುತ್ತಾ ಸಾಧನೆ ಮಾಡಿದ್ದಾಳೆ,

ಶ್ರೇಯಾ ಳ ತಂದೆ ಮಾಧವ ಪದ್ಮನಾಭ ಗಾಂವ್ಕಾರ ಕೋಲಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಲ್ಲಿ ಸರಕಾರಿ ಅಭಿಯೋಜಕರಾಗಿದ್ದಾರೆ. ತಾಯಿ ಬಾಗೀರಥಿ ಗಾಂವಕಾರ ಮತ್ತು ತಮ್ಮ ಶ್ರೀಶ ಇವರುಗಳ ಜೊತೆ ಕೋಲಾರದಲ್ಲಿ ಶ್ರೇಯಾ ಓದುತ್ತಿದ್ದಾಳೆ. ಹಿಂದಿನಿಂದಲೂ ಶಿಕ್ಷಣ ಕ್ಷೆತ್ರದಲ್ಲಿ ಉತ್ತಮ ವಾಗಿದ್ದ ಇವರ ಕುಟುಂಬ ದಲ್ಲಿ ಶ್ರೇಯಾ ಳ ಅಜ್ಜ ದಿವಂಗತ ಪದ್ಮನಾಭ ಗಾಂವ್ಕಾರ ಅವರು ಗ್ರಾಮೀಣ ಭಾಗದಲ್ಲಿ ಸರಕಾರಿ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಶ್ರೇಯಾಳ ಸಾಧನೆಗೆ, ಮೆಚ್ಚಿ ಮನೆಯ ಮಗಳೆಂದು ಊರಿನ ತಾಲೂಕಿನ ಜನತೆ ಅಭಿನಂದಿಸಿರುತ್ತಾರೆ.

Banner Ad