ಸುದ್ದಿ ಕನ್ನಡ ವಾರ್ತೆ

ಅಹಮದಾಬಾದ್:ಟಿ20 ವಿಶ್ವಕಪ್‌ನ 2026 ರ ಪೈನಲ್ ಪಂದ್ಯದ ಆರಂಭಕ್ಕೆ ಈಗಾಗಲೇ ಕ್ಷಣಗಣನೇ ಆರಂಭವಾಗಿದ್ದು,ಟಿ 20 ವಿಶ್ವಕಪ್‌ನ ಮೊದಲ ಸೆಮಿಪೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಜಯ ಸಾಧಿಸುವ ಮೂಲಕ ಪೈನಲ್ ಪ್ರವೇಶಿಸಿದರೆ,ಎರಡನೇಯ ಸೆಮಿಪೈನಲ್ ನಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು 7 ರನ್‌ಗಳಿಂದ ಸೋಲಿಸುವ ಮೂಲಕ ಪೈನಲ್ ಪ್ರವೇಶಿಸಿದೆ. ಸಾಬರಮತಿ ತಟದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ನ್ಯೂಜಿಲೆಂಡ್ ತಂಡದ ವಿರುದ್ಧ ಕಣಕ್ಕಿಳಿಯಲಿದೆ.ಎರಡುವರೇ ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್‌ ಪೈನಲ್ ನಲ್ಲಿ ಭಾರತ ತಂಡದ ಕಪ್ ಗೆಲ್ಲುವ ಕನಸು ಭಗ್ನವಾಗಿತ್ತು.ಆ ಕಹಿಯನ್ನು ಮರೆಸಿ ಗೆಲುವಿನ ದಾಖಲೆ ಬರೆಯುವ ತವಕದಲ್ಲಿ ಭಾರತ ತಂಡ ಇದೆ.ಇಂದು ನಡೆಯುವ ಪೈನಲ್ ಪಂದ್ಯದಲ್ಲಿ ಭಾರತದ ತಂಡವು ಪಂದ್ಯದ ಎಲ್ಲಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಟಿ20 ವಿಶ್ವಕಪ್‌ ಗೆಲ್ಲಲಿ ಎಂಬುದು ಕೋಟ್ಯಾಂತರ ಭಾರತೀಯರ ಹಾರೈಕೆ.