ಸುದ್ದಿ ಕನ್ನಡ ವಾರ್ತೆ
ಸಿರುಗುಪ್ಪ,:. ತಾಲೂಕಿನ ತೆಕ್ಕಲಕೋಟೆಯ ರಾಷ್ಟ್ರೀಯ ಹೆದ್ದಾರಿ 150 ಎ ಹತ್ತಿರ ಎಂಜಿ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಸಂಜೆ ಕುರಿಹಟ್ಟಿಗೆ ತೆರಳುವ ಸಂದರ್ಭದಲ್ಲಿ ಸಿರುಗುಪ್ಪ ಕಡೆಯಿಂದ ವೇಗವಾಗಿ ಬರುತ್ತಿದ್ದ ಬುಲೆರೋ ವಾಹನ ಕುರಿಮಂದೆಗೆ ನುಗ್ಗಿದ ಪರಿಣಾಮ 7 ಕುರಿಗಳು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಖಡಕಲಾಟ ಗ್ರಾಮದ ಕುರಿಗಾಹಿ ಕರಗರ ಸೋಮಣ್ಣ ಎನ್ನುವವರಿಗೆ ಸೇರಿದ 600 ಕುರಿಗಳ ಮಂದೆಯನ್ನು ಹತ್ತಿರದ ಜಮೀನಿನಲ್ಲಿ ತಂಗಿಸಲು ಹೋಗುವ ವೇಳೆ ಈ ಘಟನೆ ಸಂಭವಿಸಿದೆ.
ಅಪಘಾತದಲ್ಲಿ 7 ಕುರಿಗಳು ಸಾವನ್ನಪ್ಪಿದ್ದು, 10 ಕುರಿಗಳು ತೀವ್ರವಾಗಿ ಗಾಯಗೊಂಡಿವೆ.ಈ ಬಗ್ಗೆತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಚಿತ್ರವಿವರ. ಜೂನ್ 15. ಎಸ್ ಜಿ ಪಿ 05. ಸಿರುಗುಪ್ಪ.ತಾಲೂಕಿನ ತೆಕ್ಕಲಕೋಟೆಯ ರಾಷ್ಟ್ರೀಯ ಹೆದ್ದಾರಿ 150 ಎ ಹತ್ತಿರ ಎಂಜಿ ಪೆಟ್ರೋಲ್ ಬಂಕ್ ಬಳಿ ಬುಲೆರೋ ವಾಹನ ಕುರಿಮಂದೆಗೆ ನುಗ್ಗಿದ ಪರಿಣಾಮ 7 ಕುರಿಗಳು ಸ್ಥಳದಲ್ಲಿ ಸಾವನ್ನಪ್ಪಿವೆ.
