ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ಜೂನ್ 18 ಗುರುವಾರದಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ 110\33\11 ಕೆವಿ ಗಣೇಶಗುಡಿ ಸಬ್ ಸ್ಟೇಶನಿನಲ್ಲಿ ಹಾಗೂ ಜೋಯಿಡಾ 33\11 ರಲ್ಲಿ ತುರ್ತು ನಿರ್ವಹಣೆ ಕೆಲಸವಿರುವುದರಿಂದ ಜೋಯಿಡಾ ತಾಲೂಕಿನ ಜೋಯಿಡಾ, ನಂದಿಗದ್ದೆ, ಪ್ರಧಾನಿ,ನಾಗೋಡಾ,ಕಾತೇಲಿ (ಕುಂಬಾರವಾಡಾ) ಗಾಂಗೋಡಾ ಅಣಶಿ,ಉಳವಿ,ಜೋಯಿಡಾ ಗ್ರಾಮೀಣ ಶಾಖೆಯ ಅವೇಡಾ, ಜಗಲಬೇಟ, ಹಾಗೂ ಶಿಂಗರಗಾಂವ ಗ್ರಾಮ ಪಂಚಾಯತದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ,ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮಾರ್ಗ ನಿರ್ವಹಣೆ ಕೆಲಸ ಮುಗಿದರೆ ಮಾರ್ಗ ಚಾಲನೆ ಗೊಳಿಸಲಾಗುವುದು ಎಂದು ದಾಂಡೇಲಿ ಹೆಸ್ಕಾಂ ಇಲಾಖೆಯ ಎಇಇ ದೀಪಕ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಕಾರಣ ಗ್ರಾಹಕರು ಸಹಕರಿಸಬೇಕಾಗಿ ವಿನಂತಿ.