Banner Ad

ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಯಲ್ಲಾಪುರ ತಾಲೂಕಿನ ಮಲವಳ್ಳಿಯಲ್ಲಿ ಜನವರಿ 18 ಮತ್ತು 20 ರಂದು ಮಕರಸಂಕ್ರಮಣ ಜಾತ್ರೆಯ ಪ್ರಯುಕ್ತ ಮಲವಳ್ಳಿಯ ಶ್ರೀ ರಾಮಲೀಲಾ ಬಯಲು ರಂಗ ಮಂಟಪದಲ್ಲಿ ಎರಡೂ ದಿನ ಇಡೀ ರಾತ್ರಿ ಸಾಮಾಜಿಕ ನಾಟಕ ಪ್ರದರ್ಶನ ಅದ್ಧೂರಿಯಾಗಿ ನಡೆಯಿತು.

 

Banner Ad

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಲವಳ್ಳಿಯಲ್ಲಿ ನಡೆದ ನಾಟಕಕ್ಕೆ ಸುಮಾರು 70 ವರ್ಷಗಳ ಇತಿಹಾಸವಿದೆ. ಹಳೇಯ ಸಂಪ್ರದಾಯದಂತೆ ಇಂದಿನ ಹೊಸ ಯುವ ಪೀಳಿಗೆಯವರೂ ಕೂಡ ಈ ನಾಟಕ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ.

 

ಶ್ರೀ ರಾಮಲಿಂಗದೇವ ಯುವಕ ಮಂಡಳ (ರಿ) ಮಲವಳ್ಳಿ ಇವರ ಆಶ್ರಯದಲ್ಲಿ ಸಾಮಾಜಿಕ ನಾಟಕ ಪ್ರದರ್ಶನ ಜರುಗಿತು. ಜನವರಿ 18 ರಂದು ಎರಡು ನಾಟಕ ಮತ್ತು ಜನವರಿ 20 ರಂದು ಎರಡು ನಾಟಕ ಪ್ರದರ್ಶನ ನಡೆಸಲಾಯಿತು. ಎರಡೂ ದಿನ ಅದ್ಧೂರಿಯಾಗಿ ನಾಟಕ ಪ್ರದರ್ಶನ ನಡೆಯಿತು. ಈ ಎರಡೂ ನಾಟಕಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

Banner Ad