Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕಾರ್ಟೋಳಿ,ಖಾನಗಾಂವ,ವಾಗೇಲಿ ಹಾಗೂ ಮುಡಿಯೇ ಶಾಲೆಗಳ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಮಂಗಳೂರಿನ ನವಚೇತನ ಹಾಗೂ ಸಾವಯವ ಕೃಷಿ ಬಳಗ ವತಿಯಿಂದ, ಪ್ರಮುಖ ಪರಿಸರ ಹೋರಾಟಗಾರರಾದ ದಿನೇಶ್ ಹೊಳ್ಳ ಅವರ ನೇತೃತ್ವದಲ್ಲಿ ಸಾವಯವ ಕೃಷಿಯ ಮಹತ್ವ ಹಾಗೂ ಪ್ರಸ್ತುತ ಕಾಲದಲ್ಲಿ ಅದರ ಅಗತ್ಯತೆ ಕುರಿತು ಜಾಗೃತಿ ಸಂವಾದ ಕಾರ್ಯಕ್ರಮ ನಡೆಯಿತು.

Banner Ad

ಈ ಸಂದರ್ಭದಲ್ಲಿ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಉಪಯುಕ್ತ ಮಾಹಿತಿಗಳನ್ನು ತಂಡದಲ್ಲಿದ್ದ ವಿಷಯ ಪರಿಣಿತರು ವಿವರವಾಗಿ ನೀಡಿದರು,ಜೊತೆಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ಸಹ ವಿತರಿಸಲಾಯಿತು.

ಕಾರ್ಯಕ್ರಮ ಯಶಸ್ವಿಯಾಗಲು ಕಾರಟೋಳಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಪಾಲಕ-ಪೋಷಕರು, ಊರಿನ ಪ್ರಮುಖರು ಹಾಗೂ ಶಿಕ್ಷಕರು ಸಂಪೂರ್ಣ ಸಹಕಾರ ನೀಡಿದರು.ಅದೇ ರೀತಿಯಾಗಿ ಉಳಿದ ಶಾಲೆಯ ಶಿಕ್ಷಕ ವೃಂದದವರು,ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು ಸಹಕಾರ ನೀಡಿದರು.

Banner Ad