Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖ ಗ್ರಾಮದ ತಮ್ಮಣಗಿ ಮಜರೆಯ ಗುಂದ ಸೀಮಾ ಪರಿಷತ್ ಅಧ್ಯಕ್ಷ ಡಿ.ಟಿ. ಹೆಗಡೆಯವರ ಮನೆಯಲ್ಲಿ ದಿನಾಂಕ:02-11-2025 ರ ರವಿವಾರ ಭಗವದ್ಗೀತೆ ಸಪ್ತಾಹಕ್ಕೆ ವೇದಮೂರ್ತಿ ಪ್ರವೀಣ ಭಟ್ಟ ಅವರ ಪುರೋಹಿತ್ಯದಲ್ಲಿ ದೀಪ ಪ್ರಜ್ವಲನ ಮಾಡುವ ಮೂಲಕ ಚಾಲನೆ ನೀಡಿದ ಭಗವದ್ಗೀತೆಯ ಸಪ್ತಾಹ ಕಾರ್ಯಕ್ರಮ ಶನಿವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.

Banner Ad

ಶ್ರೀಭಗವದ್ಗೀತಾ ಅಭಿಯಾನ- ಕರ್ನಾಟಕ,ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ,ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ(ರಿ) ಶಿರಸಿ(ಉ.ಕ)ಇವರ ಮಾರ್ಗದರ್ಶನದಲ್ಲಿ ಭಗವದ್ಗೀತೆಯ 11ನೇಯ ಅಧ್ಯಾಯದ ಪಠಣ ನಡೆಯಿತು.ತಮ್ಮಣಗಿ ಮಜರೆಯ ಮಾತೆಯರು,ಭಕ್ತವೃಂದದವರು ಉಪಸ್ಥಿತರಿದ್ದರು.ಗುಂದ ಸೀಮಾ ಪರಿಷತ್ ಅಧ್ಯಕ್ಷ ಡಿ.ಟಿ.ಹೆಗಡೆಯವರು ಭಗವದ್ಗೀತೆಯ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

Banner Ad