ಸುದ್ದಿ ಕನ್ನಡ ವಾರ್ತೆ
ಶಿರಸಿ: ಮಳಲಗಾವ್ ಗ್ರಾಮದಲ್ಲಿ ಬತ್ತದ ಗದ್ದೆಗೆ ಹಾಕಿದ್ದ ವಿದ್ಯುತ್ ತಂತಿಗೆ ನೇರವಾಗಿ ವಿದ್ಯುತ್ ಹರಿಸಿದ್ದ ರಿಂದ ಈ ವಿದ್ಯುತ್ ತಂತಿ ತಗುಲಿ ಆನೆ ಒಂದು ಮೃತಪಟ್ಟ ಘಟನೆ ನಡೆದಿದೆ. ತನ್ನ ಬತ್ತದೆ ಗದ್ದೆ ರಕ್ಷಿಸಿಕೊಳ್ಳಲು ಗದ್ದೆ ಸುತ್ತಲೂ ಕರೆಂಟ್ ಬೇಲಿ ಹಾಕಿದ್ದ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬನವಾಸಿ ವಿಭಾಗದ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಆನೆಯ ಸಾವಿಗೆ ಕಾರಣರಾದ ಶಿವಪ್ಪ ನಾಯಕ, ಹಾಗೂ ಮಗ ನಾಗರಾಜ್ ನಾಯಕ್ ರವರನ್ನು ವಶಕ್ಕೆ ಪಡೆದಿದ್ದಾರೆ.
ಮೃತ ಆನೆಯನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭತ್ತದ ಗದ್ದೆಗೆ ಆನೆಗಳ ಕಾಟದಿಂದ ತಪ್ಪಿಸಿಕೊಳ್ಳಲು ರೈತನು ತನ್ನ ಗದ್ದೆಗೆ ತಂತಿಗೆ ನೇರವಾಗಿ ವಿದ್ಯುತ್ತನ್ನು ಹರಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ನಿನ್ನಲಾಗಿದೆ.
