ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ದನಗಳ ಮೇವಿನ ಒಣ ಹುಲ್ಲು ಸಾಗಿಸುತ್ತಿದ್ದ ವಾಹನ ಅಗ್ನಿಗೆ ಆಗುತಿಯಾದ ಘಟನೆ ಯಲ್ಲಾಪುರದ ಬಿಸ್ಗೋಡ್ ಹೊಸಮನೆ ಬಳಿ ನಡೆದಿದೆ. ಈ ಘಟನೆಯಲ್ಲಿ ಬೋಲೇರೋ ಪಿಕಪ್ ವಾಹನ ಹಾಗೂ ಅದರಲ್ಲಿದ್ದ 65 ಪೆಂಡೆ ವಣಹುಲ್ಲು ಸಂಪೂರ್ಣ ಸುಟ್ಟು ಬಸ್ಮವಾಗಿದೆ.

ಕಲಘಟಗಿಯ ಚನ್ನಬಸಯ್ಯ ಎಂಬುವರಿಗೆ ಸೇರಿದ ಪಿಕಪ್ ವಾಹನ ಇದಾಗಿದ್ದು, ವಾಹನದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಯಲ್ಲಾಪುರದ ಅಗ್ನಿಶಾಮಕದಳದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ನೀರು ಹಾಯಿಸಿ ಬೆಂಕಿಯನ್ನು ನಂದಿಸಿದರು.