Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ 88 ಗ್ರಾಮ ಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಸರಕಾರ ಘೋಷಣೆಮಾಡಲುನಿರ್ಧರಿಸುತ್ತಿರುವುದರಿಂದಆಬಗ್ಗೆ ಪ್ರತಿಭಟಿಸಲು ಬಾಜಪಾ ಜೋಯಿಡಾ ಮಂಡಲ ನಿರ್ಧರಿಸಿದೆ, ಮಂಡಳ ಅಧ್ಯಕ್ಷ ಶಿವಾಜಿ ಗೋಸಾವಿ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.

Banner Ad

ನಮ್ಮ ಜೋಯಿಡ ತಾಲ್ಲೂಕಿನ ಅರಣ್ಯ, ಕಾಡು ಪ್ರಾಣಿಗಳು, ಗಿಡಮೂಲಿಖೆಗಳು, ಗೆಡ್ಡೆ ಗೆಣಸುಗಳು, ಪ್ರವಾಸಿ ತಾಣಗಳು ದೇಶಾದ್ಯಂತ ಹೆಸರುವಾಸಿಯಾಗಿ ಇರುವಂತದ್ದು ನಮಗೆ ಹೆಮ್ಮೆಪಡುವಂತಹ ವಿಷಯವಾಗಿರುತ್ತದೆ, ಏಕೆಂದರೆ ಈ ಪರಿಸರದ ಸಮೃದ್ಧಿಯನ್ನು ಕಾಪಾಡಿಕೊಂಡು ಬರುತ್ತಿರುವುದು ಜೋಯಿಡಾ ತಾಲೂಕಿನ ಪ್ರತಿಯೊಬ್ಬ ನಾಗರಿಕರಾಗಿರುತ್ತಾರೆ. ಆದರೇ ಕೆಲವೊಂದು ಸರಕಾರದ ಯೋಜನೆ ಗಳು ನಮ್ಮ ಜೋಯಿಡಾ ತಾಲೂಕಿನ ಜನತೆಯ ಜೀವನಕ್ಕೆ ಕೊಡಲಿ ಏಟು ಬಿದ್ದ0ತಾಗಿದೆ ಉದಾಹರಣೆಗೆ ಸೂಪಾ ಅಣ್ಣೆಕಟ್ಟು, ವೈಲ್ಡ್ ಲೈಫ್, ಟೈಗರ್ ರಿಸರ್ವ್. ಇಂತಹ ಯೋಜನೆಗಳಿಂದ ಜೋಯಿಡಾ ಜನತೆ ಜೀವನ ಅಸ್ತವ್ಯಸ್ತ ಆಗಿರುವುದು ನಾವೆಲ್ಲರೂ ಕಂಡಿರುವಂತಹ ಸತ್ಯತೆ. ಹಾಗಿರುವಾಗ ಮತ್ತೆ ಇದೀಗ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯ ಎಂದು ನಮ್ಮ ಜೋಯಿಡ ತಾಲೂಕಿನ 88 ಗ್ರಾಮಗಳನ್ನು ಸೇರ್ಪಡೆಗೊಳಿಸಿರುವುದು ಮತ್ತಷ್ಟು ಜೋಯಿಡ ಜನತೆಗೆ ಆಘಾತಕಾರಿ ವಿಷಯವಾಗಿರುತ್ತದೆ..
ಇದನ್ನು ವಿರೋಧಿಸುವುದು ಜೋಯಿಡ ತಾಲೂಕಿನ ಸಮಸ್ತ ನಾಗರಿಕರ ಕರ್ತವ್ಯವೂ ಆಗಿರುತ್ತದೆ,ಆದಕಾರಣ ಜೋಯಿಡ ತಾಲ್ಲೂಕಿನ ಬಿಜೆಪಿ ಮಂಡಲದಿಂದ ಹಳಿಯಾಳ ಜೋಯಿಡ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಸುನಿಲ್ ಹೆಗಡೆ ಅವರ ನೇತೃತ್ವದಲ್ಲಿ ದಿನಾಂಕ 13/ರಂದು ನಾಳೆ ಗುರುವಾರ ಬೆಳ್ಳಿಗ್ಗೆ 10.00 ಗಂಟೆಗೆಜೋಯಿಡಾ ಶಿವಾಜಿ ಸರ್ಕಲ್ ನಲ್ಲಿ ಪ್ರತಿಭಟನೆ ಹಮ್ಮಿ ಕೊಳ್ಳಲಾಗಿದೆ, ನಂತರ ಎಲ್ಲಾ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಬಳಿ ತೆರಳಿ ಮನವಿ ನೀಡಲಾಗುವುದು ಎಂದು ನಿರ್ಧರಿಸಲಾಗಿದೆ.

ಈ ಪ್ರತಿಭಟನೆಗೆ ಸಾರ್ವಜನಿಕರು ಬಿಜೆಪಿ ಜೋಯಿಡ ಮಂಡಲದ ಸಮಸ್ತ ಕಾರ್ಯಕರ್ತರು ಹಾಗೂ ತಮಗೆ ಸಂಬಂಧ ಪಡುವ ಗ್ರಾಮದ ಜನರನ್ನು ಕರೆದುಕೊಂಡು ಬರಬೇಕಾಗಿ ವಿನಂತಿಸಿಕೊಳ್ಳುತ್ತೇನೆ…

ಶಿವಾಜಿ ಗೋಸಾವಿ
ಜೋಯಿಡ ಮಂಡಲದ ಅಧ್ಯಕ್ಷರು

Banner Ad