ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ತಾಲೂಕಿನ ಔರಾದ ಸದಾಶಿವಗಡ ರಾಜ್ಯ ಹೆದ್ದಾರಿ 34 ಜೋಯಿಡಾದ ನುಜ್ಜಿ ಇಂದ ಬಾಡಪೋಲಿ ತನಕ ಸಂಪೂರ್ಣ ಹಾಳಾಗಿದೆ. ಸರಿಪಡಿಸುವಂತೆ ಒತ್ತಾಯಿಸಿ ನವೆಂಬರ್ 20 ರಂದು ಅಣಶಿ ಯಲ್ಲಿ ರಸ್ತೆ ತಡೆ ಮಾಡುವುದಾಗಿ ತಾಲೂಕಾ ಕುಣಬಿ ಸಮಾಜ ಜೊಯಿಡಾ ದ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಿದೆ .
ತಾಲೂಕಿನ ನುಜ್ಜಿಗ್ರಾಮ ದಿಂದ ಬಾಡಪೋಲಿ ತನಕ ಔರಾದ್ ಸದಾಶಿವಗಡ ರಾಜ್ಯ ಹೆದ್ದಾರಿ (34) ರಸ್ತೆ ಇದು 6 ಕಿಮೀ ಸಂಪೂರ್ಣ ಹೊಂಡ ಮಯವಾಗಿದೆ. ಜಿಲ್ಲಾ ಕೇಂದ್ರ ಕಾರವಾರಕ್ಕೆ ಸಂಪರ್ಕ ಸಾಧಿಸುವ ಪ್ರಮುಖ ರಸ್ತೆಯಾಗಿದೆ. ಶಾಲಾ ವಿದ್ಯಾರ್ಥಿಗಳು, ಗರ್ಭಿಣಿ ಬಾಣಂತಿ ಯರು ವಯಸ್ಸಾದವರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆ ಸರಿಪಡಿಸುವಂತೆ ಅನೇಕ ಸಲ ಇಲಾಖೆಗೆ ಕೇಳಿಕೊಳ್ಳಲಾಗಿದೆ.ಆದರೆ ಲೋಕೋಪಯೋಗಿ ಇಲಾಖೆ ಕಾಲಹರಣ ಮಾಡುತ್ತಿದೆ. ಶುಕ್ರವಾರ ನವೆಂಬರ್ 20 ರಂದು ಔರಾದ್ ಸದಾಶಿವಗಡ ರಾಜ್ಯ ಹೆದ್ದಾರಿ (34) ಅಣಶಿ ಯಲ್ಲಿ ತಡೆದು ಪ್ರತಿಭಟನೆ ನಡೆಸಲು ತೀರ್ಮಾನಿಸಿ ತಹಶೀಲ್ದಾರ್ ಜೊಯಿಡಾ ರವರ ಮೂಲಕ ಜಿಲ್ಲಾಧಿಕಾರಿ ಗಳಿಗೆ ಮನವಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಕುಣುಬಿ ಸಮಾಜದ ತಾಲೂಕಾ ಅಧ್ಯಕ್ಷ ಪ್ರೇಮಾನಂದ ವೇಳಿಪ್, ಜಿಲ್ಲಾ ಕುಣುಬಿ ಸಮಾಜದ ಅಧ್ಯಕ್ಷ ಸುಭಾಷ್ ಗಾವಡಾ, ಉಪಾಧ್ಯಕ್ಷ ಕೃಷ್ಣ ಮಿರಾಶಿ, ಕಾರ್ಯದರ್ಶಿ ದಯಾನಂದ ಕುಮಗಾಳಕ, ಖಜಾಂಚಿ ದಿವಾಕರ ಕುಂಡಲಕರ, ಅಜಿತ್ ಮಿರಾಶಿ, ರಾಜೇಶ್ ಗಾವಡಾ ಮುಂತಾದವರು ಇದ್ದರು.
