ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತವು ಎಸೆಯುತ್ತಿರುವ ಕಸ ದಿಂದ ಸುರಕ್ಷಿತ ಸಂತ್ರಿ ಗ್ರಾಮವು ಕೂಡ ಕಲುಷಿತ ವಾಗುತ್ತಿದೆ.ಇದರಿಂದಾಗಿ ಗ್ರಾಮಸ್ಥರಿಗೆ ಝಾoಡೀಸ್ ನಂತ ಬೇರೆ ಬೇರೆ ಕಾಯಿಲೆಗಳು ಬರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಸಂತ್ರಿ ಗ್ರಾಮದಲ್ಲಿ ಪ್ರತಿ ವರ್ಷ ಶ್ರೀಕೃಷ್ಣ ಮೂರ್ತಿಯನ್ನು ಗ್ರಾಮಸ್ತರು ಕೂರಿಸಿ ವಾರಗಳ ಕಾಲ ಭಜನೆ, ಸಂಗೀತ,ಸತ್ಸಂಗ ಇನ್ನಿತರ ಕಾರ್ಯಕ್ರಮ ಗಳನ್ನು ನಡೆಸುತ್ತಿದ್ದಾರೆ. ಇದು ಕಳೆದ ಹಲವಾರು ವರ್ಷ ಗಳಿಂದ ನಡೆದು ಬಂದಿದೆ, ಈ ಬಾಗದ ರಸ್ತೆ ಗಳನ್ನು ಕೂಡ ಗ್ರಾಮದ ಜನರೇಪ್ರತಿ ವರ್ಷ ಸರಿಪಡಿಸಿಕೊಂಡು ಮಾದರಿ ಆಗಿದ್ದಾರೆ, ಆದರೆ ಜೋಯಿಡಾ ಗ್ರಾಮ ಪಂಚಾಯತ್ ಊರಿನ ಕೊಳಕು ಕಸವನ್ನೆಲ್ಲ ಸಂತ್ರಿ ರಸ್ತೆಯಲ್ಲಿ ಎಸೆಯುವ ಮೂಲಕ ತನ್ನ ಕೊಳಕು ತನವನ್ನು ತೋರಿಸುತ್ತಿದೆ.
ಕಸವನ್ನು ಹೇಗೆ ನಿರ್ವಹಿಸ ಬೇಕು ಎಂಬ ಮಾರ್ಗ ಸೂಚಿಯನ್ನು ಕಡೆಗಣಿಸಿ ಊರಿನ ಜನತೆಗೆ ಕೊಳಕು ತನವನ್ನು ತೋರಿಸುತ್ತಿದೆ. ಜನರಿಗೆ ಮಾಧರಿ ಆಗಬೇಕಾದ ಗ್ರಾಮ ಪಂಚಾಯತದ ಕೆಲಸ ಸುತ್ತ ಮುತ್ತಲ ಗ್ರಾಮದ ಜನರಿಗೆ ತುಂಬಾ ಬೇಸರ ತರಿಸಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಕ್ಕೆ ತಿಳಿಸಿದರೂ ತನ್ನ ಹಳೆಯ ಚಾಳಿ ಬಿಡದ ಗ್ರಾಮ ಪಂಚಾಯತ ಕ್ಕೆ ಹೇಳುವವರು ಯಾರು ಎಂಬ ಪ್ರಶ್ನೆ ಜನರನ್ನು ಕಾಡಿದೆ,,, ಆದ್ದರಿಂದ ತಾಲೂಕು ಪಂಚಾಯತ ಅಧಿಕಾರಿಗಳು ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈ ಕೊಂಡು ಸುಂದರ ಹಸಿರಿನ ಗ್ರಾಮ ವನ್ನು ಕೊಳಕಿನಿಂದ ಬಿಡುಗಡೆ ಮಾಡುವ ಮೂಲಕ ಶ್ರೀಕೃಷ್ಣ ಮೂರ್ತಿ ಕುರಿಸುವ ಗ್ರಾಮಸ್ಥರಿಗೆ ಒಂದು ಸಭಾ ಭವನ ವನ್ನು ಕಟ್ಟುವ ಮೂಲಕ ಭರವಸೆ ನೀಡಬೇಕು ಎಂದು ಗ್ರಾಮದ ಜನತೆ ಆಗ್ರಹಿಸಿದ್ದಾರೆ.
