ಸುದ್ದಿ ಕನ್ನಡ ವಾರ್ತೆ
.. ಜೋಯಿಡಾ ದ ಯರಮುಖ ದಲ್ಲಿ ಸಪ್ತ ಸ್ವರ ಸೇವಾ ಸಂಸ್ಥೆ ಯಕ್ಷಗಾನ ಸಪ್ತಾಹ ವನ್ನು ಕೆಳೆದ 11ವರ್ಷ ಗಳಿಂದ ನಡೆಸಿ ಕೊಂಡು ಬಂದಿದೆ. ಕಳೆದ 23 ವರ್ಷ ಗಳಿಂದ ಸಂಸ್ಥೆ ನಡೆದು ಕೊಂಡು ಬಂದಿದೆ ಉತ್ತಮ ಪರಿಸರ ದೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮತ್ತು ಸಮಾಜಕ್ಕೆ ಉತ್ತಮ ಕಾರ್ಯಕ್ರಮ ನೀಡುತ್ತಾ ಮಹಿಳೆಯರಿಗೆ ಮಾಧರಿ ಯಾಗಿದೆ ಎಂದು ಕಾರವಾರ ದ ಮಾಜಿ ಶಾಸಕ ಗಂಗಾಧರ ಭಟ್ ಹೇಳಿದರು.

ಅವರು ಯರಮುಖ ದಲ್ಲಿ ಸಪ್ತಸ್ವರಸೇವಾ ಸಂಸ್ಥೆ ಯವರು ಹಮ್ಮಿಕೊಂಡ ಗಡಿನಾಡಲ್ಲೊಂದು ಯಕ್ಷಗಾನ ಸಪ್ತಾಹ ಉತ್ಸವ ವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡುತ್ತಾ ಮಾತನಾಡುತ್ತಿದ್ದರು. ಒಂದು ದಿನ ಕಾರ್ಯಕ್ರಮ ನಡೆಸುವುದೇ ಕಷ್ಟ, ಆದರೆ ಇಲ್ಲಿನ ಮಹಿಳೆಯರು ಸಪ್ತಾಹ ವನ್ನೇ ನಡೆಸುತ್ತಿದ್ದಾರೆ. ಸಂಸ್ಥೆ ನಡೆದು ಬಂದ ದಾರಿ ನಮಗೆ ಖುಷಿ ಅನಿಸಿದರೂ, ಕಷ್ಟ ನಡೆಸಿದವರಿಗೇ ಗೊತ್ತು ಎಂದು ಹೇಳುತ್ತಾ ಇಂಥ ಸಂಸ್ಥೆ ಗಳು ಬೆಳೆಯ ಬೇಕು, ಸಮಾಜ ಬೆಂಬಲಿಸ ಬೇಕು ಎಂದರು. ಉಡುಪಿಯ ಯಕ್ಷಗಾನ ಕಲಾ ರಂಘದ ಕಾರ್ಯದರ್ಶಿ ಮುರಳಿ ಕಡೇಕಾರ್ ಮಾತನಾಡಿ ಜೋಯಿಡಾ ದಂತ ಕಾಡಿನಲ್ಲಿ ಇಂತ ಸಂಘಟನೆ ಮಾಡಿದ ಸಪ್ತ ಸ್ವರ ಸಂಸ್ಥೆಯ ಕರಗೆ ಬಂದಿದ್ದೇನೆ ಈ ಸಂಸ್ಥೆ ಇನ್ನಷ್ಟು ಬೆಳೆಯಲಿ, ಎಂದು ಹೇಳುತ್ತಾ, ಉಡುಪಿಯ ಯಕ್ಷಗಾನ ಕಲಾ ರಂಗ ಬೆಳೆದು ಬಂದ ಕಾರ್ಯಚಟುವಟಿಕೆ ಗಳನ್ನು ವಿವರಿಸಿದರು, ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಚಿತ್ರ ಕಲಾ ವಿದ ರಾದ ಸ್ಥಳೀಯ ರಾಜೇಶ್ ದೇಸಾಯಿ ಮತ್ತು ಮಿಲಾಗ್ರಿಸ ಬ್ಯಾಂಕ್ ದಾಂಡೇಲಿ ಯಲ್ಲಿ ವ್ಯವಸ್ಥಾಪಕ, ಕಲಾವಿದ, ದತ್ತಾತ್ರೇಯ ಕೋಟೆಮನೆ, ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ ವಹಿಸಿ ಮಾತನಾಡಿದರು, ವೇದಿಕೆ ಯಲ್ಲಿ ಗಣ್ಯರಾದ, ಸುಧರ್ಶನ್ ಭಾಗ್ವತ್, ವೇದಮೂರ್ತಿ ಪ್ರಸನ್ನ ಭಟ್, ರಾಘವೇಂದ್ರ ಭಾಗ್ವತ್, ಶ್ರೀಮತಿ ಗೌರಿ ದೇಸಾಯಿ, ಉಪಸ್ಥಿತರಿದ್ದರು, ಸಂದ್ಯಾ ದೇಸಾಯಿ, ರಾಧಾ ಹೆಗಡೆ, ಅರ್ಚನಾ ಹೆಗಡೆ, ಇತರರು ಕಾರ್ಯಕ್ರಮ ನಡೆಯಲು ಸಹಕರಿಸಿದರು.
