ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ನಂದಿಗದ್ದೆಯ ಬಯಲು ರಂಗ ಮಂದಿರದಲ್ಲಿ ಬರುವ ಶನಿವಾರ ದಿನಾಂಕ 24 ರಂದು ಆರೋಗ್ಯ ಭಾರತಿ ಗುಂದ ಮತ್ತು ಏಕಲ ಅಭಿಯಾನ ದಾಂಡೇಲಿ ಇವರ ಸಹಯೋಗದಲ್ಲಿ, ಉಚಿತ ಆರೋಗ್ಯ ತಪಾಸಣಾ ಶಿಭಿರ ನಡೆಯಲಿದೆ. ಜೊತೆಯಲ್ಲಿ ಔಷದಿ ವಿತರಣೆ ಕೂಡ ನಡೆಯಲಿದೆ. ಬೆಳಿಗ್ಗೆ 10 ಘಂಟೆಯಿಂದ ಮದ್ಯಾಹ್ನ ಮೂರು ಘಂಟೆಯ ವರೆಗೆ ಆರೋಗ್ಯ ಶಿಭಿರ ನಡೆಯಲಿದ್ದು, ವಿವಿಧ ಪಾರಂಪರಿಕ ವೈದ್ಯರುಗಳು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ಫು ಮಾರ್ಗದರ್ಶನ ಮಾಡುವರು.
ಕಾರ್ಯಕ್ರಮ ವನ್ನು ಪಾರಂಪರಿಕ ವೈದ್ಯ ಭಟ್ರ ಮನೆಯ ಮಹಾಬಲ್ವಶ್ವರ ಎಲ್ ಭಾಗ್ವತ ಅವರು ಉದ್ಘಾಟನೆ ಮಾಡುವರು. ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಶೇವಾಳಿಯ ಪಾರಂಪರಿಕ ತಜ್ಞ ವೈದ್ಯ ಶ್ರೀಧರ ದೇಸಾಯಿ, ವಹಿಸುವರು. ಮುಖ್ಯ ಅತಿಥಿಗಳಾಗಿ, ಗುಂದ ದ ನಾಟಿ ವೈದ್ಯ ಪುರುಸೊ, ಸಾವರಕಾರ, ಡಾಕ್ಟರ್ ವೈಶಾಲಿ ಕಿತ್ತೂರ್, ಆರೋಗ್ಯ ಭಾರತೀಯ ನಾಗೇಶ ಜಿ ಹೆಗಡೆ,ಮತ್ತು ಪಾರಂಪರಿಕ ವೈದ್ಯ ಸಿದ್ರಮನೆಯ ಶ್ರೀಶೈಲ ತಿಮ್ಮಣ್ಣ ಭಟ್.ಇವರು ಉಪಸ್ಥಿತರಿರುವರು. ಊರಿನ ಮತ್ತು ಅಕ್ಕ ಪಕ್ಕ ದ ಊರಿನ ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದು ಕೊಳ್ಳಲು ಆರೋಗ್ಯ ಭಾರತಿ ಗುಂದದ ಶಶಿಹೆಗಡೆ,ಕೇಳಿಕೊಂಡಿದ್ದಾರೆ
