ಸುದ್ದಿ ಕನ್ನಡ ವಾರ್ತೆ
ಜೊಯಿಡಾ ತಾಲೂಕಿನಲ್ಲಿ ಚರ್ಮ ಗಂಟು ರೋಗ ದನಕರುಗಳಿಗೆ ಹರಡಿದೆ. ಆದರೆ ಪಶು ಸಂಗೋಪನೆ ಇಲಾಖೆಯಲ್ಲಿ ಔಷಧಿ ಇಲ್ಲ. ಲಸಿಕೆಯೂ ಇಲ್ಲ,ಇದರಿಂದ ಕೃಷಿಕರಿಗೆ ತುಂಬಾ ತೊಂದರೆ ಆಗಿದೆ ಕೊಟ್ಟಿಗೆಯಲ್ಲಿ ದನಕರುಗಳು ಗಂಟು ರೋಗದಿಂದ ಬಳಲುತ್ತಿದ್ದು, ಅನೇಕವು ಜೀವನ್ಮರಣ ನಡುವೆ ಹೋರಾಟ ನಡೆಸುತ್ತಿವೆ . ಕೊಟ್ಟಿಗೆ ಖಾಲಿಯಾಗುವ ಆತಂಕದಲ್ಲಿ ರೈತರು ಇದ್ದಾರೆ.
ತಾಲೂಕಿನಲ್ಲಿ ನೂರಾರು ದನ,ಕರುಗಳು ಚರ್ಮ ಗಂಟು ರೋಗ ಬಾಧೆಯಿಂದ ನರಳುತ್ತಿವೆ. ಹುಟ್ಟಿದ ಕರುಗಳಿಗೂ ಇದು ಬಿಡುತ್ತಿಲ್ಲ, ದೊಡ್ಡ ದನಗಳು ಹೇಗೂ ನೋವನ್ನು ಸಹಿಸಬಹುದು ಆದರೆ ಕರುಗಳ ಸ್ಥಿತಿ ಚಿಂತಾಜನಕ ವಾಗಿದೆ ಆದರೆ ಇಲ್ಲಿಯ ತನಕ ಕೇವಲ 32 ಕೆಸ್ ಗಳು ಇಲಾಖೆಯಲ್ಲಿ ದಾಖಲಾಗಿದೆ. ಪಶು ಸಂಗೋಪನೆ ಇಲಾಖೆಯಲ್ಲಿ ಈ ಚರ್ಮ ಗಂಟು ರೋಗಕ್ಕೆ ಯಾವುದೇ ಔಷಧಿ ಸಂಗ್ರಹ ಇರುವುದಿಲ್ಲ. ಮುನ್ನೆಚ್ಚರಿಕೆಗಾಗಿ ಇಡಲಾದ ಲಸಿಕೆ ರಿಂಗ್ ವೆಕ್ಸಿನೇಷನ್ ಅಗತ್ಯ ಇದ್ದಲ್ಲಿ ಮಾತ್ರ ನಿಡಲಾಗುತ್ತದೆ ಎಂದು ಪಶುವೈದ್ಯರು ಹೇಳುತ್ತಾರೆ. ತಾಲೂಕಿನಲ್ಲಿ ಇರುವ 20048 ದನಗಳ ಗತಿ ಏನು ಎಂದು ರೈತರು ಆತಂಕ ಪಡುತ್ತಿದ್ದಾರೆ.
ಎಳೆಯ ಕರುವಿಗೆ ಹೆಚ್ಚು ಬಾಧೆ.
ತಾಲೂಕಿನಲ್ಲಿ ಒಂದರಿಂದ ಎರಡು ವರ್ಷದ ಕರುಗಳಿಗೆ ಈ ಚರ್ಮ ಗಂಟು ರೋಗ ಹರಡಿದೆ. ಅನೇಕ ಕರುಗಳು ಸಾವನ್ನಪ್ಪುವ ಸ್ಥಿತಿಯಲ್ಲಿ ಇದೆ. ಮುಂದೆ ಏನು ಎಂಬ ಭೀತಿ ಆವರಿಸಿದೆ. ಈ ರೋಗ ತಾಲೂಕಿನ ದಿನಗಳ ಜೀವ ಪಡೆಯುವ ಆತಂಕ ಎದುರಾಗಿದೆ.
ಇದೆಂತ ಮಾನವಿಯತೆ
ನವೆಂಬರ್ ತಿಂಗಳ ನಂತರ ಕಾಲು ಬಾಯಿ ರೋಗದ ಲಸಿಕೆ ನೀಡುವ ಪ್ರಕ್ರಿಯೆ ಪಶುಸಂಗೋಪನೆ ಇಲಾಖೆ ಆರಂಭಿಸಲಿದೆ ಅಂತೆ, ಆದರೆ ಅಲ್ಲಿ ವರೆಗೆ ಇಲಾಖೆ ಕೈ ಕಟ್ಟಿ ಕುಳಿತು ಕೊಳ್ಳವುದು ಸರಿಯೇ ಎಂಬ ಪ್ರಶ್ನೆ ರೈತರಿಗೆ ಕಾಡಿದೆ ಪ್ರಸ್ತುತ ಚಾಲ್ತಿಯಲ್ಲಿರುವ ಚರ್ಮ ಗಂಟು ರೋಗಕ್ಕೆ ಯಾವುದೇ ಔಷಧಿ ಸಂಗ್ರಹ ಇಲ್ಲ. ನವೆಂಬರ್ ತಿಂಗಳ ನಂತರ ಎರಡು ರೋಗಗಳಿಗೆ ಒಂದೇ ಸಲ ಲಸಿಕೆ ನೀಡುವುದಾಗಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ . ಚರ್ಮ ಗಂಟು ರೋಗ ಹರಡುತ್ತಿರುವ ದನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ವೈರಸ್ ರೋಗವಾಗಿದೆ. ಹರಡುವ ಸಾಧ್ಯತೆ ಹೆಚ್ಚಿದೆ.ಇದರ ಹೊಣೆ ಯಾರು ಹೊರುತ್ತಾರೆ.
ರೋಗ ಹತೋಟಿಗೆ ಕ್ರಮವಹಿಸಬೇಕು.
ನನ್ನ ಎರಡು ವರ್ಷದ ಕರುವಿಗೆ ಚರ್ಮರೋಗ ಕಾಣಿಸಿಕೊಂಡಿದೆ. ಅಂಬ್ಯುಲೆನ್ಸ್ ನವರು ಇಂಜಿಕ್ಸೆನ್ ಹಾಕಿದ್ದಾರೆ. ಹೆಚ್ಚು ರೋಗ ಹರಡುವ ಆತಂಕ ಇದೆ. ಹತೋಟಿಗೆ ಕ್ರಮವಹಿಸಬೇಕು.
ಎಂದು ತೇಲೋಲಿ ಸುರೇಶ್ ಗಾವಡಾ ಹೇಳುತ್ತಾರೆ .
ಕಳೆದ ವರ್ಷ ಲಸಿಕೆ ಮಿಸ್ ಆಗಿ ಉಳಿದ ದಿನಗಳಿಗೆ ರೋಗ ಕಂಡುಬಂದಿದೆ. ಎಮರ್ಜೆನ್ಸಿ ರಿಂಗ್ ವೆಕ್ಸಿನೇಷನ್ ಪ್ರಾರಂಭಿಸುತ್ತೇವೆ. ರೈತರು ಸಹಕರಿಸಬೇಕುಎಂದು ಡಾ. ಮಂಜಪ್ಪ ಎ.
ಎ.ಡಿ. ಪಶುಸಂಗೋಪನೆ ಇಲಾಖೆ ಜೊಯಿಡಾ.ಹೇಳುತ್ತಾರೆ.
