Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತದ ನಂದಿಗದ್ದಾ ವಿವಿದೊದ್ದೇಶ ಸಹಕಾರಿ ಸಂಘ ಯರಮುಖ ದಲ್ಲಿ ಗ್ರಾಮೀಣ ಕೃಷಿಕರಿಗಾಗಿ ಶನಿವಾರ ಒಂದು ದಿನದ ಕೃಷಿ ತರಬೇತಿ ಯನ್ನು ನಡೆಸಲಾಯಿತು,

Banner Ad

 

ಜಿಲ್ಲಾ ಪಂಚಾಯತ ಕೃಷಿ ಇಲಾಖೆ, ನಂದಿಗದ್ದಾ ಸಹಕಾರಿ ಸಂಘ, ಸಾವಯವ ಕೃಷಿ ವಿಭಾಗ ಸ್ಕೋಡ್ ವೇಸ್ ಸಂಸ್ಥೆ ಈ ತರಬೇತಿ ಕಾರ್ಯಕ್ರಮ ನಡೆಸಿದವು , ಇದರಿಂದ ಕೃಷಿಕರಿಗೆ ಗ್ರಾಮದಲ್ಲಿಯೇ ಎಲ್ಲಾ ಮಾಹಿತಿಗಳು ಸಿಗುವಂತಾಯಿತು . ಕಾರ್ಯಕ್ರಮ ಶನಿವಾರ ಬೆಳಿಗ್ಗೆ 11ಘಂಟೆ ಯಿಂದ ಪ್ರಾರಂಭವಾಯಿತು. ಪ್ರಮುಖ ವಾಗಿ ಅಡಿಕೆ, ಕಾಳುಮೆಣಸು ಇನ್ನಿತರ ಬೆಳೆ ಸಂರಕ್ಷಣೆ ಮತ್ತು ಅಡಿಕೆಗೆ ಬಂದ ಎಲೆಚುಕ್ಕಿ ರೋಗ ಹತೋಟಿ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮ ವನ್ನು ಸ, ಕೃಷಿ ನಿರ್ದೇಶಕರಾದ ರಮೇಶ ತುರಮುರಿ ಯವರು ಉದ್ಘಾಟನೆ ಮಾಡಿ ಕಾರ್ಯಕ್ರಮ ದ ಉದ್ದೇಶ ಮತ್ತು ಸಾವಯವ ತಾಲೂಕಿನ ಮಹತ್ವ ಉಪಯೋಗ ಗಳನ್ನು ವಿವರಿಸಿದರು.

 

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು,ಗಣ್ಯರಾದ ನಾರಾಯಣ ಹೆಗಡೆ ಮಾತನಾಡಿ ರೋಗಕ್ಕೆ ಕಾರಣ ವಾದ ತೋಟ ಗಳ ನಿರ್ವಹಣೆ ಮತ್ತು ತೋಟಗಾರಿಕೆ ಕ್ರಮಗಳ ಮಾಹಿತಿ ನೀಡಿದರು, ವಿಶೇಷ ಉಪನ್ಯಾಸಕ ರಾದ ಡಾ /ವಿ ಎಂ ಹೆಗಡೆ ಯವರು ರೈತರ ಎಲೆಚುಕ್ಕಿ ರೋಗದ ಆತಂಕ ನಿವಾರಣೆಗೆ ತುಂಬಾ ಉಪಯುಕ್ತ ಸಲಹೆ ನೀಡುತ್ತಾ ಯಾವ ಯಾವ ಕಾಲಕ್ಕೆ ಏನೇನು ಕೃಷಿ ಕಾರ್ಯ ಗಳನ್ನು ಮಾಡಿದರೆ ಉತ್ತಮ, ತೋಟಗಳ ನಿರ್ವಹಣೆ ಹೇಗೆ ಮಾಡಿದರೆ ಉತ್ತಮ ಎನ್ನುವುದನ್ನು ಎಳೆ ಎಳೆ ಯಾಗಿ ಬಿಡಿಸಿ ಹೇಳುತ್ತಾ, ಕೃಷಿಗೆ ಮರ್ಯಾದೆ ನೀಡಿದರೆ ಕೃಷಿ ನಮಗೂ ಗೌರವ ನೀಡುತ್ತದೆ ಎಂದು ರೈತರ ಹಲವಾರು ಸಮಸ್ಯೆ ಗಳಿಗೆ ಸ್ಪಂದಿಸಿದರು ಪ್ರಗತಿಪರ ರೈತ ಮಹೇಶ ಹೆಗಡೆ ಅರಗಿನಮನೆ ತಮ್ಮ ಕೃಷಿ ಬೇಸಾಯದ ಕುರಿತು ವಿವರಿಸಿ ರೈತರು ಹೇಗೆ ಬದುಕು ಕಟ್ಟಿ ಕೊಳ್ಳಬೇಕೆನ್ನುವುದನ್ನು ತಿಳಿಸಿದರು. ನಂದಿಗದ್ದಾ ಸಹಕಾರಿ ಸಂಘದ ಅಧ್ಯಕ್ಷ ಆರ್ ವಿ ದಾನಗೇರಿ ಪ್ರಸ್ತಾವಿಕವಾಗಿ ಮಾತನಾಡಿದರು.

 

ವೇದಿಕೆಯಲ್ಲಿ ಟಿ ಎಸ್ ಎಸ್ ನಿರ್ದೇಶಕ ಸದಾಶಿವ ದೇಸಾಯಿ, ತೋಟಗಾರಿಕಾ ಇಲಾಖೆ ಅಧಿಕಾರಿ ಎಲ್ಲಾಲಿಂಗ ಇವರುಗಳು ಉಪಸ್ಥಿತರಿದ್ದರು ಅಡಿಕೆಗೆ ಬಂದ ಎಲೆ ಚುಕ್ಕಿ ಇನ್ನಿತರ ರೋಗದ ಎಲೆಗಳನ್ನು ಪ್ರದರ್ಶಿಸಲಾಯಿತು.ಅಡಿಕೆ ಡಾಕ್ಟರ ಎಂದೇ ಪ್ರಸಿದ್ಧ ರಾದ ವಿ ಎಂ ಹೆಗಡೆ ಮತ್ತು ಶಿಷ್ಯ ಮಹೇಶ ಹೆಗಡೆ ಅವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು,

 

ಕಾರ್ಯಕ್ರಮ ವನ್ನು ಉತ್ತಮ ವಾಗಿ ನಿರ್ವಹಿಸಿದವರು ಸಾವಯವಕೃಷಿ ಪ್ರತಿನಿಧಿ ಅಮರ ಭಾಗವತ ಅವರು. ನೂರಾರು ಸಂಖ್ಯೆ ಯಲ್ಲಿ ಸೇರಿದ ರೈತರಿಗೆ ಊಟ ಚಹಾ ದ ವ್ಯವಸ್ಥೆ ಮಾಡಲಾಗಿತ್ತು.

ಗಾಯಕರಾದ ಸುಧಾಮ ದಾನಗೇರಿ ರೈತ ಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು

Banner Ad