ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕನ್ನು ಬರಗಾಲ ಪೀಡಿತ ಪಟ್ಟಿಗೆ ಸೇರಿಸಿ ಸೌಲಭ್ಯ ಕೊಡಿ, ಎಂದು ಜಿಲ್ಲಾ ಕುಣುಬಿ ಸಮಾಜದ ಅಧ್ಯಕ್ಷ ಸುಭಾಷ್ ಗಾವಡಾ ಸರಕಾರಕ್ಕೆ ಮನವಿ ನೀಡಿದ್ದಾರೆ. ಹಾಗೂ ತಾಲೂಕಿನ ಸ್ಥಳೀಯ ನಿರುದ್ಯೋಗಿ ಯುವಕ, ಯುವತಿಯರಿಗೆ ಹೊರಗುತ್ತಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಇಂದು ರಾಜ್ಯ ಸರ್ಕಾರಕ್ಕೆ ಮನವಿ ಯನ್ನು ತಹಶೀಲ್ದಾರ್ ಮೂಲಕ ನೀಡಿದರು.
ಜೊಯಿಡಾ ತಾಲೂಕಿನಲ್ಲಿ 3100 ಹೆಕ್ಟೇರ್ ಮಳೆ ಆಶ್ರಿತ ಬೇಸಾಯ ಇದ್ದು 5743 ರೈತ ಕುಟುಂಬಗಳು ಇದೆ. ಕಳೆದ ಒಂದು ತಿಂಗಳಿನಿಂದ ಮಳೆ ಇಲ್ಲದೆ ಝರಿ ಬತ್ತಿದೆ. ಜಮಿನು ಒಣಗಿ ಹೋಗಿದೆ. ನಾಟಿ ಮಾಡಿದ ಭತ್ತದ ಸಶಿ ಒಣಗಿದ್ದು ಬೆಳೆ ಬರುವ ಸೂಚನೆ ಇಲ್ಲ. ರೈತರ ಬದುಕು ಕಷ್ಟದಾಯಕ ವಾಗಿದೆ. ಸರ್ಕಾರ ತಾಲೂಕನ್ನು ಬರ ಪೀಡಿತ ಪಟ್ಟಿಗೆ ಸೇರಿಸಿ ನೆರವಿಗೆ ಧಾವಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಜೊಯಿಡಾ ತಾಲೂಕಿನ ಅರಣ್ಯ ಇಲಾಖೆ , ಹುಲಿ ಯೋಜನೆ, ಕಂದಾಯ, ಆರೋಗ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿಕ್ಷಣ, ಸಮಾಜ ಕಲ್ಯಾಣ, ಪಶುಸಂಗೋಪನೆ, ಕೃಷಿ, ತೋಟಗಾರಿಕೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಕರ್ನಾಟಕ ಪವರ್ ಕಾರ್ಪೋರೇಷನ್ ಗಣೇಶಗುಡಿ ಹೀಗೆ ವಿವಿಧ ಇಲಾಖೆಗಳಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಹೊರಗುತ್ತಿಗೆ ಕೆಲಸಕ್ಕೆ ಬರುತ್ತಿದ್ದಾರೆ. ಸ್ಥಳೀಯ ಕುಣಬಿ, ಮರಾಠಾ, ದೇವಳಿ, ಗೌಳಿ, ವೈಶ್ಯ ವಾಣಿ, ಇನ್ನಿತರ ಜನಾಂಗದ ಯುವಕರು ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಕೂಲಿ ಕೆಲಸಕ್ಕೆ , ಗುಳೆ ಹೋಗುತ್ತಿದ್ದಾರೆ. ಕಾರಣ ಸ್ಥಳಿಯರಿಗೆ ಎಲ್ಲಾ ಇಲಾಖೆಗಳಲ್ಲಿ ಹೊರಗುತ್ತಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕುಣುಬಿ ಸಮಾಜದ ಅಧ್ಯಕ್ಷ ಸುಭಾಷ್ ಗಾವಡಾ, ದಿವಾಕರ ಕುಂಡಲಕರ, ದತ್ತಾ ಮಿರಾಶಿ, ಪ್ರಭಾಕರ ವೇಳಿಪ, ಸುಭಾಷ್ ವೇಳಿಪ, ದಯಾನಂದ ಕುಮಗಾಳಕರ, ಚಂದ್ರಶೇಖರ ವೇಳಿಪ, ದತ್ತಾ ಶೇಳಪೇಕರ, ಶ್ಯಾಮ್ ಕಾಂತಾ ಕುಮಗಾಳಕರ ಇದ್ದರು.
