Banner Ad

ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತದ 2021-26 ನೇ ಸಾಲಿನ ಅವಧಿಯ ಐದನೇಯ ವರ್ಷದ ಕೊನೆಯ ಸಭೆಯನ್ನು ಗುರುವಾರ ಗಾಂಗೋಡಾ ಗ್ರಾಮ ಪಂಚಾಯತದಲ್ಲಿ ನಡೆಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರುಗಳು,ಅಭಿವೃದ್ಧಿ ಅಧಿಕಾರಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Banner Ad

ಸಭೆಯ ಕೊನೆಯಲ್ಲಿ ಈ 5 ವರ್ಷಗಳಲ್ಲಿ ಉತ್ತಮವಾದ ಸೇವೆಯನ್ನು ಸಲ್ಲಿಸಿ ಗ್ರಾಮ ಪಂಚಾಯತದ ಹೆಸರನ್ನು ರಾಜ್ಯ ಮಟ್ಟದವರೆಗೂ ಕೊಂಡೊಯ್ದು ಉತ್ತಮ ಸಾಧನೆಯನ್ನು ಮಾಡಿ ಗ್ರಾಮ ಪಂಚಾಯತದಲ್ಲಿ ಪರಸ್ಪರ ಅತ್ಯುತ್ತಮ ಹೊಂದಾಣಿಕೆಯ ಸೇವೆಯನ್ನು ಸಲ್ಲಿಸಿದ್ದಕ್ಕಾಗಿ ಗ್ರಾಮ ಪಂಚಾಯತದ ಅಧ್ಯಕ್ಷರಾದ ಪ್ರವೀಣ ದೇಸಾಯಿ ಉಪಾಧ್ಯಕ್ಷರಾದ ನೀತಾ ಡಿ,ಮಾಜಿ ಅಧ್ಯಕ್ಷರು,ಹಾಲಿ ಸದಸ್ಯರಾದ ಸುಬ್ರಾಯ ಎನ್ ಹೆಗಡೆ, ಸದಸ್ಯರಾದ ಲಕ್ಷ್ಮಿಕಾಂಬಳೆ ಇವರುಗಳಿಗೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ನಬಿಲಾಲ್ ಇನಾಮ್ದಾರ್ ಹಾಗೂ ಎಲ್ಲಾ ಸಿಬ್ಬಂದಿಗಳು ಗೌರವಪೂರ್ಣವಾಗಿ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿ ಭಾವನಾತ್ಮಕವಾಗಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿಕೊಟ್ಟರು.

Banner Ad