Banner Ad

ಸುದ್ದಿ ಕನ್ನಡ ವಾರ್ತೆ

ಅಂಗನವಾಡಿ ನೌಕರರ ಜೋಯಿಡಾ ತಾಲೂಕು ೧೦ ನೇ ಸಮ್ಮೇಳನ ಜೋಯಿಡಾದಲ್ಲಿ ನಡೆಯಿತು.
ಉದ್ಘಾಟನೆ ನೆರವೇರಿಸಿದ ರಾಜ್ಯ ಅಂಗನವಾಡಿ ನೌಕರರ ಜಿಲ್ಲಾ ಅಧ್ಯಕ್ಷರಾದ ಯಮುನಾ ಗಾಂವ್ಕರ್ ಮಾತನಾಡಿ ಮಹಿಳೆ ಮತ್ತು ಮಕ್ಕಳ ಹಕ್ಕುಗಳನ್ನು ಇಲ್ಲದಂತೆ ಮಾಡಲು ಕೇಂದ್ರದಲ್ಲಿ ಆಳುವ ಸರ್ಕಾರ ಹುನ್ನಾರ ನಡೆಸಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ನ ಹೆಸರನ್ನು ಬದಲಿಸಲಾಗಿದೆ,ಎಸ್.ಐ.ಆರ್ ಕೆಲಸಗಳನ್ನು ಅಂಗನವಾಡಿ ನೌಕರರ ಮೇಲೆ ಹೇರಿ ಜನತೆಯ ಸಿಟ್ಟಿಗೆ ಕಾರಣವಾಗಿದೆ. ಮಾತ್ರವಲ್ಲ ವಿದ್ಯಾರ್ಥಿ ಯುವಜನರು ತಮ್ಮ ಉದ್ಯೋಗ ಶಿಕ್ಷಣದ ಸಲುವಾಗಿ ಹಾಗೂ ಸಂವಿಧಾನ ನೀಡಿದ ಪ್ರಜಾಪ್ರಭುತ್ವ ಹಕ್ಕುಗಳಿಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಮುಂದಾದರೆ ದೆಹಲಿಯ ಬೀದಿಯನ್ನು ರಣಾಂಗಣವನ್ನಾಗಿಸಲಾಗಿದೆ. ಜನರಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಬಂಧಿಸಲಾಗಿದೆ. ಕಾರ್ಮಿಕ ಸಂಹಿತೆ ತರಲಾಗಿದೆ. ರಾಜಧಾನಿಯಲ್ಲಿ ಹೋರಾಟದ ಸ್ಥಳವನ್ನೇ ಇಲ್ಲದಂತೆ ಮಾಡಲಾಗಿದೆ. ಇನ್ನು ಕೆಲಸದ ಖಾಯಮಾತಿ ಕನಿಷ್ಟಕೂಲಿ ದೂರದಮಾತು. ಇದನ್ನು ಎದುರಿಸಿ ಸಮುದಾಯದ ಜೀವನಾಡಿ ಅಂಗನವಾಡಿಗಳ ರಕ್ಷಿಸಲು ಮುಂದಾಗೋಣ ಎಂದರು.

Banner Ad

ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಮಿತಿ ಅಧ್ಯಕ್ಷರದಾದ ಮಂಗಲಾ ಕಾಂಬ್ಳೆ ಸಿಐಟಿಯು ಧ್ವಜಾರೋಹಣ ನೆರವೇರಿಸಿ, ಜೋಯಿಡಾದ ಕಠಿಣ ದುರ್ಗಮ ಪ್ರದೇಶದಲ್ಲಿ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರು ಜನರಿಗೆ ಆಹಾರ, ಆರೋಗ್ಯ, ಶಾಲಾಪೂರ್ವ ಶಿಕ್ಷಣ ಸೌಲಭ್ಯ ತಲುಪಿಸಲು ಶ್ರಮಿಸುತ್ತಿದ್ದಾರೆ. ಆದರೆ ಬಿ.ಎಲ್.ಒ ಕೆಲಸ ಒಳಗೊಂಡು ಐಸಿಡಿಎಸ್ ಅಲ್ಲದ ಕೆಲಸಗಳನ್ನು ಹೇರಿದ್ದರಿಂದ ತುಂಬಾ ಮಾನಸಿಕ ಒತ್ತಡದಲ್ಲಿ ಎಲ್ಲವನ್ನು ನಿಭಾಯಿಸುವಂತಾಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಶಾಸಕರು, ಸಂಸದರು, ಸಚಿವರ ಎದುರು ನಮ್ಮ ಅಹವಾಲುಗಳನ್ನು ಹೊತ್ತು ಸಾಗೋಣ ಎಂದರು.
ಅಂಗನವಾಡಿ ನೌಕರರ ಸಂಘದ ಜೋಯಿಡಾ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿ ನಿವೃತ್ತ ಜೀವನಕ್ಕೆ ಪಾದಾರ್ಪಣೆ ಮಾಡಿರುವ ಕಾಮ್ರೇಡ್ ನಂದಾ ಪವಾರ್, ಉಪಾಧ್ಯಕ್ಷರಾಗಿ ಕೆಲಸ ಮಾಡಿ ನಿವೃತ್ತರಾಗಿರುವ ಕಾಮ್ರೇಡ್ ನಳಿನಿ ಸುಂಟನಕರ್ ರಿಗೆ ಸಮ್ಮೇಳನಲ್ಲಿ ಸನ್ಮಾನ ಮಾಡಲಾಯಿತು.

 

ಚಳುವಳಿಯ ಜೊತೆಗೆ ಇರುವುದಾಗಿ ಭರವಸೆ ನೀಡಿದ್ದು ನೆರೆದವರಿಗೆ ಸ್ಪೂರ್ತಿ ನೀಡಿತು.
ಗೀತಾ ಪ್ರಧಾನಿ ಸ್ವಾಗತಿಸಿದರು. ಆರಂಭದಲ್ಲಿ ಎಲ್ಲರೂ ಹುತಾತ್ಮ ನಮನ ಸಲ್ಲಿಸಿದರು. ಕಾರ್ಯದರ್ಶಿ ರೂಪಾ ನಾಯ್ಕ ಪ್ರಾಸ್ತಾವಿಕ ಮಾತಾಡಿ ಕರಡು ವರದಿ ಮಂಡಿಸಿದರು. ವರದಿ ಮೇಲೆ ಕ್ಯಾಸಲ್ ರಾಕ್, ರಾಮನಗರ, ಪ್ರಧಾನಿ, ಜಗಲಪೇಟ್, ಉಳವಿ, ಕುಂಬಾರವಾಡಾ, ಜೋಯಿಡಾ ಪ್ರತಿನಿಧಿಗಳು ವಲಯವಾರು ಚರ್ಚೆಗಳನ್ನು ನಡೆಸಿ ಸ್ಪೂರ್ತಿಯುತ ಘೋಷಣೆಗಳೊಂದಿಗೆ ವರದಿ ಅಂಗೀಕರಿಸಿದರು. ಖಜಾಂಚಿ ಗೀತಾ ನಾಯ್ಕ ವಂದಿಸಿದರು. ಮಂಗಲಾ ಕಾಂಬಳೆ ನೇತೃತ್ವದಲ್ಲಿ ನೂತನ ಸಮಿತಿ ಆಯ್ಕೆ ಮಾಡಲಾಯಿತು.

Banner Ad