Banner Ad

ಸುದ್ದಿ ಕನ್ನಡ ವಾರ್ತೆ
ಶಿರಸಿ: ತಾಲೂಕಿನ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರ ಹಾಗೂ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳವರ ಸಾನ್ನಿಧ್ಯದಲ್ಲಿ ಭಾನುವಾರದಿಂದ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ಆರಂಭಗೊಂಡಿದೆ.

​ಉತ್ಸವದ ಅಂಗವಾಗಿ ಗಣಪತಿ ಪೂಜೆ, ಪುಣ್ಯಾಹ, ಮಹಾಸಂಕಲ್ಪ, ಋತ್ವಿಕ್ವರಣ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಶ್ರೀಚಕ್ರಾರ್ಚನೆ,ಶ್ರೀಮದ್
​​ದೇವೀಭಾಗವತ, ಚಂಡೀಸಪ್ತಶತಿ, ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಧ್ಯಾತ್ಮ ರಾಮಾಯಣ ಪಾರಾಯಣಗಳು ಮಹಾ ಸಂಕಲ್ಪದೊಂದಿಗೆ ಆರಂಭವಾದವು.

Banner Ad

​ಮಂಜುನಾಥ ಹೆಗಡೆ ಮಣಿಗಾರ ದಂಪತಿಗಳು ಯಜಮಾನತ್ವ ವಹಿಸಿಕೊಂಡರು.
​ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ, ಶ್ರೀಸೂಕ್ತ, ಪುರುಷಸೂಕ್ತ, ದುರ್ಗಾಸೂಕ್ತ, ದೇವೀಸೂಕ್ತ ಪಠಣ ಹಾಗೂ ನವಗ್ರಹ, ಬ್ರಹ್ಮಾಸ್ತ್ರ ಜಪಗಳು ನವರಾತ್ರಿಯುದ್ದಕ್ಕೂ ನಡೆಯಲಿವೆ.

ಪ್ರತಿ ದಿನ ಮಧ್ಯಾಹ್ನ ​​ದುರ್ಗಾಪೂಜೆ, ಮಂಗಳಾರತಿ ಹಾಗೂ ದೇವೀಭಾಗವತ ಪುರಾಣ ಪ್ರವಚನ ಜರುಗಲಿದ್ದು, ರಾತ್ರಿ ದುರ್ಗಾಪೂಜೆ, ಮಂಗಳಾರತಿ ಮತ್ತು ತೀರ್ಥಪ್ರಸಾದ ವಿತರಣೆ ಕೂಡ ಇರಲಿದೆ. ಉತ್ಸವದ ಅವಧಿಯಲ್ಲಿ ಉಭಯ ಶ್ರೀಗಳು ಬ್ರಾಹ್ಮೀ ಮುಹೂರ್ತ ಹಾಗೂ ಪ್ರದೋಷ ಕಾಲದಲ್ಲಿ ಶ್ರೀಚಕ್ರಾರ್ಚನೆ ನೆರವೇರಿಸಲಿದ್ದಾರೆ.
​ಶರನ್ನವರಾತ್ರಿ ಅಂಗವಾಗಿ ಸ್ವರ್ಣವಲ್ಲಿ ಮಠದ ಸುಧರ್ಮಾ ಸಭಾಭವನದಲ್ಲಿ 20ರವರೆಗೆ ಪ್ರತಿದಿನ ಸಂಜೆ 6ರಿಂದ ರಾತ್ರಿ 8.30ರವರೆಗೆ ಸಾಂಸ್ಕೃತಿಕ ಉತ್ಸವ ನಡೆಯಲಿದೆ.

Banner Ad