ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ವಿದ್ಯಾರ್ಥಿಶಾಹಿಲ್ ಶ್ರೀಕಾಂತ ಕಾಂಬಳೆ, ಅಕ್ಟೊಬರ್ 11 ರಂದು ಕಾರವಾರದಲ್ಲಿ ನಡೆದ 2ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಜೋಯಿಡಾ ತಾಲೂಕಿನ ಅಸ್ಪೈರ್ ಸ್ಪೋರ್ಟ್ಸ್ ಹಾಗೂ ಕರಾಟೆ ಅಕಾಡೆಮಿಯ ವಿದ್ಯಾರ್ಥಿ ಯಾಗಿ ಸ್ಪರ್ದಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿ ಚಿನ್ನದ ಪಧಕ ಗೆದ್ದಿದ್ದಾನೆ . ಸ್ಪರ್ಧೆಯ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶಾಹಿಲ್ , ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿ ತಾಲೂಕಿಗೆ ಕೀರ್ತಿ ತಂದಿದ್ದಾನೆ .ಶಾಹಿಲ್ ಸಾಧನೆ ಗೆ ಸ್ಕೂಲ್ ಕಮಿಟಿ ಯವರು ಅಭಿನಂದಿಸಿದ್ದಾರೆ.
ಜೋಯಿಡಾ ತಾಲೂಕಿನ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ಹರಿಜನ ಅವರ ಪುತ್ರನಾದ ಶಾಹೀಲ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಶಂಸೆ ಗಳಿಸಿದ್ದಾನೆ .
ಶಾಹೀಲ ಕಾಂಬಳೆ ಈ ಸಾಧನೆಯ ಹಿಂದೆ ಕರಾಟೆ ತರಬೇತುದಾರ ರಾಜೇಶ ಗಾವಡೆ ಅವರ ತರಬೇತಿ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಪ್ರಮುಖ ಪಾತ್ರ ವಹಿಸಿದೆ.
ಶಾಹೀಲ ಅವರ ಸಾಧನೆಗೆ ಕರಾಟೆ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು, ಗಣ್ಯರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಅವರು ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸಿದ್ದಾರೆ.
