ಸುದ್ದಿ ಕನ್ನಡ ವಾರ್ತೆ
ಜೋಯಡಾದ ಕಾಳಿ ಬ್ರಿಗೇಡ್ ಈ ಕುರಿತುದಿನಾಂಕ 11 ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜೋಯಿಡಾ ದ ಕುಣಬಿ ಭವನ ದಲ್ಲಿ. ಸಾರ್ವಜನಿಕ ಸಭೆಯನ್ನು ಕರೆದಿದೆ, ಆದ್ದರಿಂದ ತಾಲೂಕಿನ ಎಲ್ಲ ಗ್ರಾಮಗಳ ಗ್ರಾಮಸ್ಥರು ಈ ಸಭೆಯಲ್ಲಿಬಾಗವಹಿಸಲು ಕೇಳಿಕೊಳ್ಳಲಾಗಿದೆ.
ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಮಂತ್ರಾಲಯ ( MOEFCC) ಎರಡು ಕರಡು ಅಧಿಸೂಚನೆ ಗಳನ್ನು ಹೊರಡಿಸಿದೆ. ಒಂದು ,ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹೊರ ಅಂಚಿನ ಪರಿಸರ ಸೂಕ್ಷ್ಮ ಪ್ರದೇಶ, ಎರಡನೆಯದು ಪಶ್ಚಿಮ ಘಟ್ಟಗಳ ೬ ರಾಜ್ಯದಲ್ಲಿ ಪರಿಸರ ಸೂಕ್ಷ್ಮ ವಲಯ. ಈಗಾಗಲೇ ನಮ್ಮ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಎಲ್ಲಾ ನೀತಿ ನಿಯಮ ಗಳು ಜಾರಿಯಲ್ಲಿವೆ. ಅರಣ್ಯ ಸಂರಕ್ಷಿತ ಪ್ರದೇಶ, ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಹಾರ್ನ್ ಬಿಲ್ ಸಂರಕ್ಷಿತ ಪ್ರದೇಶ, ಆನೆ ಕಾರಿಡಾರ್ ಇತ್ಯಾದಿ,
ಇನ್ನಷ್ಟು ಅರಣ್ಯ ನಿಯಮಾವಳಿಗಳಿಂದ ಅರಣ್ಯವಾಸಿಗಳ ಬದುಕು ಕಷ್ಟಕರ ವಾಗಲಿದೆ. ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತೊಂದರೆ ಆಗಲಿದೆ. ಅದೇ ರೀತಿ ಎರಡೂ ಅಧಿಸೂಚನೆ ಗಳಲ್ಲಿ ಸ್ಪಷ್ಟತೆ ಗಳಿಲ್ಲ. ಅದ್ದರಿಂದ ನಾವೆಲ್ಲರೂ ಇದನ್ನು ವಿರೋಧಿಸಬೇಕು. ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಂಘಸಂಸ್ಥೆಗಳು ಇದನ್ನು ವಿರೋಧಿಸಿದ್ದಾವೆ. ನಾವು ಮತ್ತಷ್ಟು ಸಂಘಟಿತರಾಗಿ ಈ ಅಧಿಸೂಚನೆ ಗಳಿಗೆ ಆಕ್ಷೇಪಣೆ ಸಲ್ಲಿಸಬೇಕು. ಮತ್ತು ಪ್ರತಿಭಟಿಸಬೇಕು. ಇದಕ್ಕಾಗಿ ಮುಂದೆ ಏನು ಮಾಡಬೇಕು, ಯಾವ ರೀತಿ ವಿರೋಧ ಮಾಡಬೇಕು ಎಂದು ಚರ್ಚೆ ಮಾಡಲು ಈ ಸಭೆಯನ್ನು ಕರೆಯಲಾಗಿದೆ. ದಯವಿಟ್ಟು ಪ್ರತಿ ಗ್ರಾಮದ ಗ್ರಾಮಸ್ಥರು, ಪ್ರಮುಖ ವ್ಯಕ್ತಿಗಳು, ಸಂಘಸಂಸ್ಥೆಗಳು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಯುವಜನರು,ಮಹಿಳೆಯರು ಈ ಸಭೆಯಲ್ಲಿ ಭಾಗವಹಿಸಬೇಕೆಂದು ಈ ಸೂಚನೆ ಮೂಲಕ ವಿನಂತಿಸುತ್ತೇವೆ.ಎಂದು ಮುಖ್ಯ ಸಂಚಾಲಕರು ಮತ್ತು ಅಧ್ಯಕ್ಷರು ಕಾಳಿಬ್ರಿಗೇಡ ಇವರು ವಿನಂತಿಸಿಕೊಂಡಿದ್ದಾರೆ.
