Banner Ad

ಸುದ್ದಿ ಕನ್ನಡ ವಾರ್ತೆ

ಉಪನಿರ್ದೇಶಕರ ಕಾರ್ಯಾಲಯ, ಉತ್ತರ ಕನ್ನಡ ಜಿಲ್ಲೆ.ಕಾರವಾರ
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
ಮಿನಿ ವಿಧಾನ ಸೌಧ, ಉತ್ತರ ಕನ್ನಡ ಜಿಲ್ಲೆ ಕಾರವಾರ 581301
Phone: 08382-226464
e-mail:-ddfoodkarwar@yahoo.in
ಇವರು ಪ್ರಕಟಣೆ ಯಲ್ಲಿ ಜಿಲ್ಲೆಯ ಎಲ್ಲಾ ತಹಶೀಲ್ದಾರರ ತಿಳಿಸಿದ್ದು ಈ ರೀತಿ ಇದೆ

Banner Ad

ವಿಷಯ : ಜಿಲ್ಲೆಯ ಎಲ್‌ಪಿಜಿ ಗ್ಯಾಸ್ ವಿತರಕರ ಸಮಸ್ಯೆ ಬಗ್ಗೆ ಸಭೆ ಕರೆಯುವ ಕುರಿತು.

ಉಲ್ಲೇಖ : ಉತ್ತರ ಕನ್ನಡ ಜಿಲ್ಲೆಯ ಗ್ಯಾಸ್ ಏಜನ್ಸಿ ಅವರ ಮೌಖಿಕ ಮನವಿ.

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯು ಶೇಕಡಾ 80% ರಷ್ಟು ಅರಣ್ಯ ಪ್ರದೇಶದಿಂದ ಅವರಿಸಿದ್ದು, ಎಲ್‌ಪಿಜಿ ಸಿಲಿಂಡರ್ ನ್ನು ಪೂರೈಕೆ ಮಾಡಲು OTP ತೆಗೆದುಕೊಳ್ಳುವದು ನೆಟ್ವರ್ಕ್ ಇಲ್ಲದೆ ಸಾಧ್ಯವಿಲ್ಲ ಎಂಬುದರ ಬಗ್ಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯು ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ ಆದರೆ ಇಲ್ಲಿ Ipg ಪೂರೈಕೆ ಮಾಡಲು 35 km ಕ್ಕಿಂತ ಹೆಚ್ಚು ದೂರ ಹೋಗಬೇಕಾದ ಅನಿವಾರ್ಯ ಇದೆ. ಇದಕ್ಕೆ ಸರಕಾರ ಆದೇಶದಂತೆ ನಿಗಧಿಪಡಿಸಲಾದ ಸಾರಿಗೆ ದರ ಹೆಚ್ಚು ತೆಗೆದುಕೊಳ್ಳಲು ಅವಕಾಶವಿರುತ್ತದೆ. ಇದು invoice ದಲ್ಲಿ ಸೇರ್ಪಡೆ ಆಗುವುದಿಲ್ಲ. ಇದರಿಂದ ಜನರು Ipg ವಿತರಕರು ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಾರೆ ಎಂಬ ದೂರು ನೀಡುತ್ತಾರೆ ಅಲ್ಲದೆ ಇನ್ನು ಕೆಲುವು ಸಮಸ್ಯೆಗಳು ಇರುವುದಾಗಿ ತಿಳಿಸಿರುತ್ತಾರೆ ಆದ್ದರಿಂದ ತಮ್ಮ ತಾಲೂಕು ಹಂತದಲ್ಲಿ ತಮ್ಮ ತಾಲೂಕಿನ ಎಲ್ಲಾ Ipg ಏಜನ್ಸಿ ವಿತರಕರನ್ನು ಸೆಪ್ಟೆಂಬರ್ 2026 ಮಾಹೆಯ ಮೊದಲ ವಾರದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಸಭೆ ಕರೆದು, ಈ ಕೆಳಕಂಡ ವಿಷಯಗಳ ಕುರಿತು ಚರ್ಚಿಸಿ ಸದರಿ ವಿಷಯಗಳ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯದ ವರದಿ ಹಾಗೂ ಸಭಾ ನಡವಳಿಯನ್ನು ಈ ಕಛೇರಿಗೆ ಕಳುಹಿಸಿಕೊಡಲು ಸೂಚಿಸಿದೆ.
ಚರ್ಚಿಸತಕ್ಕಂತಹ ವಿಷಯಗಳು ಈ ಕೆಳಗಿನಂತೆ ಇರುತ್ತವೆ.

1. ಎಲ್‌ಪಿಜಿ ವಿತರಣೆ ಸಮಯದ OTP ಸಮಸ್ಯೆ ಬಗ್ಗೆ

2. ಹೆಚ್ಚುವರಿ ಸಾರಿಗೆ ವೆಚ್ಚ INVOICE ರಲ್ಲಿ ಸೇರಿಸುವ ಬಗ್ಗೆ.

3. ಎಲ್‌ಪಿಜಿ ಏಜನ್ಸಿ ಅವರು ತಮ್ಮ ವ್ಯಾಪ್ತಿ ಪ್ರದೇಶ ಬಿಟ್ಟು ಬೇರೆ ಕಡೆ Cyllinder ನೀಡುತ್ತಿರುವ ಬಗ್ಗೆ

4. ಎಲ್‌ಪಿಜಿ ಇ-ಕೆವೈಸಿ ಕುರಿತು.

5. ಎಲ್‌ಪಿಜಿ ಏಜನ್ಸಿ ಅವರ ಇತರೆ ಬೇಡಿಕೆ ಅಥವಾ ಸಮಸ್ಯೆ ಕುರಿತು.ಉಪನಿರ್ದೇಶಕರು
ಆಹಾರ, ನಾಗರಿಕ ಸರಬರಾಜು ಹಾಗೂ
ಗ್ರಾಹಕರ ವ್ಯವಹಾರಗಳ ಇಲಾಖೆ, ಉತ್ತರ ಕನ್ನಡ ಜಿಲ್ಲೆ, ಕಾರವಾರ,ಇವರಿಗೆ ಮಾಹಿತಿ ನೀಡಲು ತಿಳಿಸಲಾಗಿದೆ

Banner Ad