Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಕರ್ನಾಟಕ ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ 7 ನೇ ಕರಡು ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಮುಂದೆ ಕಸ್ತೂರಿ ರಂಗನ್ ವರದಿ ಜಾರಿ ಆಗುವ ಮುನ್ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಜನರ ಜನ ಜೀವನಕ್ಕೆ ಮಾರಕವಾಗುವ ವರದಿ ಕೇಂದ್ರ ಸರ್ಕಾರ ಜಾರಿ ಮಾಡಕೂಡದು ಎಂದು ಬ್ಲಾಕ್ ಕಾಂಗ್ರೆಸ್ ಜೊಯಿಡಾ ಘಟಕದಿಂದ ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು..

Banner Ad

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಗಾವಡೆ ಮಾತನಾಡಿ ಜನ ವಿರೋಧಿ ಕಸ್ತೂರಿ ರಂಗನ್ ವರದಿ ಸಾರಸಗಟಾಗಿ ಕೇಂದ್ರ ಸರ್ಕಾರ ತಿರಸ್ಕಾರ ಮಾಡಬೇಕು ಎಂದರು.

ಕೆಪಿಸಿಸಿ ಸದಸ್ಯ ಸದಾನಂದ ದಬಗಾರ ಮಾತನಾಡಿ ರಾಜ್ಯ ಸರ್ಕಾರದ ಮೇಲೆ ಯಾವುದೇ ಗೂಬೆ ಕೂರಿಸುವುದು ಬೇಡಾ, ನಮ್ಮ ಸಂಸದರು ಜನರ ಪರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತುವ ಕೆಲಸ ಮಾಡಬೇಕು. ಮತ್ತು ಕಸ್ತೂರಿ ರಂಗನ್ ವರದಿ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮೊದಲು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಎಸ್ ಐ ಆರ್ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಭಾರತ ಜೋಡೊ ಯುವ ಸಂಘಗಳ ರಚನೆ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಸದಾನಂದ ದಬಗಾರ, ಯುವ ಅಧ್ಯಕ್ಷ ಅಕ್ಷಯ್ ರಾವಳ್, ಕಾರ್ಮಿಕ ವಿಭಾಗದ ಅಧ್ಯಕ್ಷೆ ಭವಾನಿ ಚೌಹಾಣ್, ಡಿಸಿಸಿ ಸದಸ್ಯ ಸಂಜಯ ಹಣಬರ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಸದಸ್ಯ ರತನ್ ಕಲ್ಮಣಕರ, ಪ್ರಭಾವತಿ ಪಾಟೇಕರ ಡಿಸಿಸಿ ಸದಸ್ಯ ವಿನಯ ದೇಸಾಯಿ ಜೊಯಿಡಾ ಘಟಕ ಅಧ್ಯಕ್ಷ, ಸುಭಾಷ್ ವೇಳಿಪ, ಸುರೇಶ್ ಗಾವಡಾ, ಬುದೊ ಕಾಲೇಕರ ಮುಂತಾದವರು ಇದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಧರ ದಬಗಾರ ಮನವಿ ಓದಿದರು.

Banner Ad