ಸುದ್ದಿ ಕನ್ನಡ ವಾರ್ತೆ
ತಮಗೆ ಈ ಊರಲ್ಲಿ ಸರಿಯಾಗುತ್ತಿಲ್ಲ ಎಂದು ಊರಿಗೆ ಊರೇ ಖಾಲಿಯಾಗುತ್ತಿದೆ. ನಿಜ , ತಾಲೂಕಿನ ಅವೇಡಾ ಗ್ರಾಮ ಪಂಚಾಯತ್ ದ ಬಾಡಗುಂದ, ಊರಿನ ಗೌಳಿವಾಡ ಮಜರೆಯ 13 ಕುಟುಂಬಗಳ ಜನತೆ ತಮ್ಮ ವಾಸ ಸ್ಥಾನವನ್ನು ಬಿಟ್ಟು ಹೋಗಿದ್ದಾರೆ. ಇಲ್ಲಿರುವ 18 ಕುಟುಂಬಗಳಲ್ಲಿ ಈಗ ಕೇವಲ 5 ಕುಟುಂಬಗಳು ಬಾಡ ಗುಂದದ ಗೌಳಿ ವಾಡದಲ್ಲಿದ್ದು ಆ ಕುಟುಂಬದವರು ಕೂಡ ತಮ್ಮವರು ಹೋದ ಹಾದಿಯಲ್ಲೇ ಹೋಗಿ ಜಾಗ ಖಾಲಿ ಮಾಡುವ ತಯಾರಿಯಲ್ಲಿದ್ದಾರೆ.

ತಾಲೂಕಿನ ಅವೇಡಾ ಗ್ರಾಮ ಪಂಚಾಯತದ ಬಾಡಗುಂದ ಗ್ರಾಮದ ಗೌಳಿ ವಾಡದ ಮಜರೆಯಲ್ಲಿ 18 ಕುಟುಂಬಗಳು ಕೂಲಿ ಮಾಡುತ್ತಾ ರೆಸಾರ್ಟ್ ಗಳಲ್ಲಿ ಕೆಲಸ ಮಾಡುತ್ತ ಜೀವನ ನಿರ್ವಹಣೆ ಮಾಡಿಕೊಂಡಿದ್ದರು 18 ಕುಟುಂಬಗಳ 103 ಜನರಲ್ಲಿ ಈಗ 74 ಜನರ 13 ಕುಟುಂಬಗಳು ವಲಸೆ ಹೋಗಿವೆ. ಉಳಿದ 5 ಕುಟುಂಬಗಳ 29 ಜನರು ಗೌಳಿವಾಡದಲ್ಲಿ ಇದ್ದಾರೆ. ದೇವರನ್ನು ನಂಬಿದವರು, ದನಗಳನ್ನು ಪೂಜಿಸಿ ಸಂತೃಪ್ತ ರಾಗಿ ಹಾಲು ಹಿಂಡಿ ಜನರಿಗೆ ಮಾರುತ್ತಾ ಅರಣ್ಯವೆ ಮನೆ ಎಂದು ನಂಬಿ ಬದುಕು ಕಟ್ಟಿಕೊಂಡ, ದನಗರ ಗೌಳಿ ಕುಟುಂಬದ ಈ ಜನರು ಅನೇಕ ವರ್ಷ ಗಳಿಂದ ಬಾಡಗುಂದ ದ ಗೌಳಿವಾಡ ಇಲ್ಲಿ ವಾಸಿಸುತ್ತಿದ್ದಾರೆ, ಆದರೆ ಅವರ ಕುಟುಂಬಕ್ಕೆ ಏನೋ ಶಾಪ ತಾಗಿದೆ ಎಂಬ ಶಂಕೆ ಅವರ ಮನದಲ್ಲಿ ಮೂಡಿದೆ ಯಂತೆ ಅದನ್ನು ಯಾರೂ ಹೇಳುತ್ತಿಲ್ಲ ಮತ್ತು ಈ ಸಮಸ್ಯೆ ಬಗ್ಗೆ ಕೇಳಿದರೆ ಯಾರೂ ಮಾತನ್ನು ಆಡುತ್ತಿಲ್ಲ. ಊರು ಬಿಟ್ಟು ಹೋಗುತ್ತಿದ್ದಾರೆ ಇದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಈ ಗೌಳಿ ಜನರ 13 ಕುಟುಂಬ ದವರು ರಾಮನಗರದ ಅಡಾಳಿ, ಹರ್ಲಿ ಮತ್ತು ಪಣಸೋಲಿ ಕಡೆಗೆ ಹೋಗಿರುತ್ತಾರೆಂದು ಹೇಳುತ್ತಾರೆ .ಅಲ್ಲಿ ಕೂಡ ಗೌಳಿ ಜನತೆ ಇರುವ ಕಾರಣ ಅಲ್ಲಿಗೆ ಹೋಗಿದ್ದಾರೆಂದು ಹೇಳುತ್ತಾರೆ.

ಬಾಡ ಗುಂದದ ಗೌಳಿ ವಾಡ ದಲ್ಲಿ ಅವರಿಗೆ ಎಲ್ಲಾ ಸೌಕರ್ಯಗಳನ್ನು ಅವೇಡಾ ಗ್ರಾಮ ಪಂಚಾಯತ ಮಾಡಿ ಕೊಟ್ಟಿದೆ. ಅವರ ಮನೆಗಳ ಜಿ. ಪಿ.ಎಸ್ ಕೂಡ ಆಗಿದ್ದು ಸರಕಾರಾದ ಎಲ್ಲಾ ಸೌಲಭ್ಯಗಳನ್ನು ಅವರು ಪಡೆಯುತ್ತಿದ್ದಾರೆ. ಈ ಜನರ ವಲಸೆ ಮಾಹಿತಿ ತಿಳಿದ ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ರವರು ಮುಂದಿನ ಕ್ರಮ ಕೈ ಕೊಳ್ಳಲು ಕಂದಾಯ ಇಲಾಖೆಗೆ ತಿಳಿಸಿದ್ದು, ಕಂದಾಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿವಲಸೆ ಹೋಗಲು ಕಾರಣ ಗಳನ್ನು ಹುಡುಕುತ್ತಿದ್ದಾರೆ.

*ಅರುಣ ಭವತಿರಾಜ್ *
ಅವೇಡಾ ಗ್ರಾ ಪಂ ಮಾಜಿ ಅಧ್ಯಕ್ಷರು
ಇವರು ಹೇಳುವ ಪ್ರಕಾರ ಈ ಗೌಳಿ ಜನರಿಗೆ ದೇವರಲ್ಲಿ ಏನೋ ಸಮಸ್ಯೆಯಾಗಿದೆ ಅಂತೆ ನಾನು ಈ ಬಗ್ಗೆ ಅವರಲ್ಲಿ ಸಭೆ ನಡೆಸಿದ್ದೇನೆ. ಗ್ರಾಮ ಪಂಚಾಯತದಿಂದ ಅವರಿಗೆ ಎಲ್ಲಾ ಸೌಲಭ್ಯವನ್ನು ನೀಡಿದ್ದೇವೆ. ತಹಶೀಲ್ದಾರ್ ರವರ ಸೂಚನೆ ಮೇರೆಗೆ ಕಂದಾಯ ಇಲಾಖೆ ಯವರನ್ನು ಕರೆಸಿ ಸಭೆ ಮಾಡಿದ್ದೇನೆ. ಯಾವ ತೊಂದರೆಯೂ ಇಲ್ಲ. ಊರೆಂದ ಮೇಲೆ ಹುಟ್ಟು ಸಾವು ಇದ್ದದ್ದೆ, ಅದನ್ನೇ ನಂಬಿ ಅಂಜಿಕೆಯಿಂದ ಊರು ಬಿಡುವುದು ಸರಿ ಅಲ್ಲ ಎಂದು ಹೇಳಿದ್ದೇವೆ. ಕೆಲ ಕಾಲದ ನಂತರ ಅವರೆಲ್ಲ ಬರುವುದಾಗಿ ಹೇಳಿದ್ದಾರೆ ನೋಡೋಣ ನಮ್ಮ ಗ್ರಾಮ ಪಂಚಾಯಿತಿಯಿಂದ ಅವರಿಗೆ ಯಾವ ತೊಂದರೆಯೂ ಆಗಿಲ್ಲ ಎಂದಿದ್ದಾರೆ.,