Banner Ad

ಸುದ್ದಿ ಕನ್ನಡ ವಾರ್ತೆ

ಕ್ಯಾಸ್ಥಲ್ರಾಕ್ ನಲ್ಲಿ ನಡೆದ ಜಗಲ್ಬೆಟ್ ವಲಯಮಟ್ಟದ ಕ್ರೀಡಾಕೂಟ ದಲ್ಲಿ ಜಗಲ್ಬೇಟ್ ಶಾಲೆಗೆ ವಿರಾಗ್ರಣಿ ಪ್ರಶಸ್ತಿ ಲಭಿಸಿದೆ ಜಗಲ್ಬೇಟ್ ವಲಯ ಮಟ್ಟದ ಕ್ರೀಡಾ ಕೂಟ ಎಲ್ಲರ ಸಹಕಾರ ದಿಂದ ಅದ್ದೂರಿಯಾಗಿ ನಡೆಯಿತು. ಕ್ಷೆತ್ರ ಶಿಕ್ಷಣಾಧಿಕಾರಿ ಪ್ರಶಾಂತ್ ನಾಯಕ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭ ಕೋರಿದರು. ಶ್ರೀಮತಿ ವಿಜಯ ಲಕ್ಷ್ಮಿ ಮೇಡಂ ಪ್ರಸ್ತಾವಿಕವಾಗಿ ಮಾತಾಡಿದರು.

Banner Ad

ಕಾರ್ಯಕ್ರಮದಲ್ಲಿ ಕ್ಯಾಷ್ಠರ್ಲಾಕ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ರೆಡ್ಕರ್, ಶಿಕ್ಷಕ ಸಂಘದ ಅಧ್ಯಕ್ಷ ಯಶವಂತ್ ನಾಯ್ಕ್, ಬಿ ಆರ್ ಪಿ ಶಶಿಕಾಂತ್ ಹೂಲಿ, ಪ್ರೌಢಧೈಹಿಕ ಶಿಕ್ಷಕರ ಅಧ್ಯಕ್ಷ ಕೃಷ್ಣ ಮೂರ್ತಿ ನಾಯಕ ಸಿ ಆರ್ ಪಿ ಭಾಸ್ಕರ್ ಗಾoವ್ಕಾರ್ ಮತ್ತು ನಾರಾಯಣ್ ದೇಸಾಯಿ ಪ್ರೌ ಢ ಶಾಲೆ ಮುಖ್ಯ ಶಿಕ್ಷಕ ರಮೇಶ್ ಚವಡ್ರಿ, ಪಡೋನ್ನತ ಮುಖ್ಯ ಶಿಕ್ಷಕ ಮಹದೇವ್ ಹಳದನಕರ್ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಜರಿದ್ದರು.

ಸಂಘಟನೆಯ ಹೊಣೆಗಾರಿಕೆಯನ್ನು ದೂಧ ಮಾಳ ಮತ್ತು ಕರೆಂಜೆ ಶಾಲೆಯವರು ವಹಿಸಿದ್ದರು. ಧೂದ್ ಮಾಳ ಶಾಲೆಯ ಶಿಕ್ಷಕ ಮಂಜುನಾಥ್ ಮೋರೆ ಎಲ್ಲರನ್ನು ಸ್ವಾಗತಿಸಿದರೆ ಡಿಗ್ಗಿ ಶಾಲಾ ಶಿಕ್ಷಕ ಪ್ರಸನ್ನ ವಂದಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಭೂಸರೆಡ್ಡಿ, ರವಿಚಂದ್ರ ಕುಮಟಾ, ಮುತ್ತಪ್ಪ ವಠಾರ ಶ್ರೀಮತಿ ಛಾಯಾ ಡೆರೆಕಾರ್, ಶ್ರೀಮತಿ ಶಂಕ್ರಮ್ಮ ನಿರ್ವಹಿಸಿದರು….ಸ್ಥಳೀಯವಾಗಿ ಕೆಸಲ್ರೋಕಜನತೆ ಹೈ ಸ್ಕೂಲನವರು ತುಂಬು ಸಹಕಾರ ನೀಡಿದರು

Banner Ad