ಸುದ್ದಿ ಕನ್ನಡ ವಾರ್ತೆ
​ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ–ಜೋಯಿಡಾ ಸಂಪರ್ಕಿಸುವ ಅಣಶಿ ಘಟ್ಟ ರಾಜ್ಯ ಹೆದ್ದಾರಿಯ ರಸ್ತೆಯಲ್ಲಿ ಗುಡ್ಡದ ಕಲ್ಲುಗಳು ಕುಸಿದು ರಸ್ತೆಯ ಮೇಲೆ ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಿರಂತರ ಮಳೆಯ ಪರಿಣಾಮವಾಗಿ ಈ ಭಾಗದಲ್ಲಿ ಭೂಕುಸಿತದ ಆತಂಕ ಹೆಚ್ಚಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ.

​ಅಣಶಿ ಘಟ್ಟವು ಕಾರವಾರ, ಕದ್ರಾ, ಅಣಶಿ ಹಾಗೂ ಜೋಯಿಡಾ ಭಾಗದ ಜನರಿಗೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಈ ರಸ್ತೆಯ ಮೂಲಕ ಜೋಯಿಡಾ, ದಾಂಡೇಲಿ ಹಾಗೂ ಬೆಳಗಾವಿ ಕಡೆಗೆ ಸಂಚಾರ ನಡೆಯುವುದರಿಂದ ಘಟ್ಟದಲ್ಲಿ ಸಂಭವಿಸುವ ಭೂಕುಸಿತವು ಈ ಪ್ರದೇಶಗಳ ಸಂಚಾರದ ಮೇಲೂ ಪರಿಣಾಮ ಬೀರುತ್ತದೆ.

​ಆದ್ದರಿಂದ ರಾತ್ರಿ ವೇಳೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ, ವೇಗವನ್ನು ನಿಯಂತ್ರಿಸಿ, ಗುಡ್ಡ ಪ್ರದೇಶಗಳಲ್ಲಿ ಅನಗತ್ಯವಾಗಿ ವಾಹನ ನಿಲ್ಲಿಸದೆ, ಅಗತ್ಯವಿದ್ದರೆ ಮಾತ್ರ ಪ್ರಯಾಣ ಕೈಗೊಳ್ಳುವುದು ಸುರಕ್ಷಿತ.