ಸುದ್ದಿ ಕನ್ನಡ ವಾರ್ತೆ

ಜೋಯಿಡಾದ ರಾಮನಗರದ ಕನ್ನಡ ಶಾಲೆಯಲ್ಲಿ 470 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಬೆರಳಣಿಕೆಯಷ್ಟು ಶಿಕ್ಷಕರಿಲ್ಲ. ಇರುವ ಶಿಕ್ಷಕರನ್ನು ಬೇರೆ ಬೇರೆ ಶಾಲೆಗಳಿಗೆ ನಿಯೋಜಿಸಿ ಇಲ್ಲಿ ಗೌರವ ಶಿಕ್ಷಕರನ್ನು ನಿಯಮಿಸಲಾಗಿದೆ . ಜೊತೆಗೆ ವಿಜ್ಞಾನ , ಗಣಿತವನ್ನು ಬೋಧಿಸುವ ಶಿಕ್ಷಕ ಸುಭಾಷ್ ಕಾಜಗಾರ ಅವರನ್ನು ಸಿ ಆರ್ ಪಿ ಮಾಡಿ ಶಿಕ್ಷಣ ಇಲಾಖೆ ಕೈ ತೊಳೆದು ಕೊಂಡಿದೆ. ಇದರಿಂದ ಮಕ್ಕಳ ಶಿಕ್ಷಣ ಪೂರ್ತಿ ಹಾಳಾಗಿದೆ. ಕಾಜಗಾರ ಅವರನ್ನು ಸಿ ಆರ್ ಪಿ ಯಿಂದ ಕಡಿಮೆ ಮಾಡಿ ಇಲ್ಲಿಯೇ ಶಿಕ್ಷರನ್ನಾಗಿ ಇರಲು ಬಿಡಿ ಎಂದು ಗ್ರಾಮಸ್ಥರು ಶಿಕ್ಷಣ ಇಲಾಖೆಗೆ ದೂರಿದ್ದಾರೆ. ಬದಲಾವಣೆ ಮಾಡದಿದ್ದರೆ ಪ್ರತಿಭಟನ ಮಾಡುವುದಾಗಿಕೂಡ ತಿಳಿಸಿದ್ದಾರೆ.

ಜೋಯಿಡಾ ಕ್ಕೆ ಶಿಕ್ಷಣಾಧಿಕಾರಿಗಳಿಲ್ಲ – ತಾಲೂಕು ತುಂಬ ವಿಸ್ತಾರವಾಗಿದ್ದು ಕೆಲದಿನ ಗಳ ಹಿಂದೆ ತಾಲೂಕಿನ ಶಿಕ್ಷಣಾಧಿಕಾರಿ ಯವರನ್ನು ವರ್ಗಾಯಿಸಲಾಗಿದೆ. ಬದಲಿಗೆ ಯಾರೂ ಇಲ್ಲ. ತಾಲೂಕಿನ ಶಿಕ್ಷಣ ಇಲಾಖೆಗೆ ಹಿಡಿತವೇ ಇಲ್ಲ. ಎಲ್ಲರೂ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಗೌರವ ಶಿಕ್ಷಕರನ್ನು ನಿಯಮಿಸಿ ಇರುವ ಕೆಲವೇ ಶಿಕ್ಷಕರು ಬಿ.ಆರ್.ಸಿ ಸಿ.ಆರ್. ಪಿ, u ಬಿಸಿಯೂಟ ಎಂದು ಶಾಲೆಗಳಿಂದ ನಾಪತ್ತೆಯಾಗಿ ಸುಖವಾಗಿದ್ದಾರೆ. ಹೀಗಾಗಿ ಸರಕಾರಿ ಶಾಲೆ ಪ್ರೌಢಶಾಲೆಗಳು ಅದೋ ಗತಿ ತಲುಪಿವೆ. ಎಂದು ದೂರಲಾಗಿದೆ.ಕಾಟಾಚಾರದ ಶಾಲೆ ನಡೆಸಿ ಎಲ್ಲರೂ ಪಾಸ್ ಎನ್ನುವ ಸ್ಥಿತಿ ತಾಲೂಕಿಗೆ ಬಂದಿದೆ.ಎಂದು ಪಾಲಕರು ದೂರಿದ್ದಾರೆ.

 

ಶಿಕ್ಷಣ ಇಲಾಖೆಯ ನಿರ್ಲಕ್ಷ – ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ನಿರ್ಲಕ್ಷಕ್ಕೆ ಶಾಲೆಗಳಲ್ಲಿ ಸರಿಯಾಗಿ ಕಲಿಕೆಗಳು ನಡೆಯುತ್ತಿಲ್ಲ. ಇದರಿಂದಾಗಿ ಪ್ರತಿ ವರ್ಷ ತಾಲೂಕಿನ ನೂರಾರು ವಿದ್ಯಾರ್ಥಿಗಳು ಐದನೇ ತರಗತಿಯಿಂದ ತಾಲೂಕಿನ ಹೊರಗೆ ಕಾರವಾರ , ದಾಂಡೇಲಿ , ಗೋವಾ, ಲೋಂಡಾ ಗಳಿಗೆ ಹೋಗುತ್ತಿದ್ದಾರೆ. ಪಾಲಕರನ್ನು ಈ ಬಗ್ಗೆ ವಿಚಾರಿಸಿದರೆ, ಮಕ್ಕಳು ಶಾಲೆಗೆ ಹೋಗದಿದ್ದರೂ ಕೇಳುವವರಿಲ್ಲ, ಪ್ರತಿ ದಿನ ಬಿಸಿಯೂಟಕ್ಕೆ ಎಂದು ಹಾಜರಿ ತೋರಿಸುತ್ತಾರೆ. ಮಕ್ಕಳನ್ನು ಪಾಸ್ ಮಾಡುತ್ತಾರೆ. 7 ನೇ ತರಗತಿಯಾದರೂ ಹೆಸರು ಸರಿಯಾಗಿ ಬರೆಯಲು ಬರೋದಿಲ್ಲ. ಅದಕ್ಕೆ ಬೇರೆ ಕಡೆ ಕಳಿಸುತ್ತಿದ್ದೇವೆ ಎನ್ನುತ್ತಾರೆ. ಹೀಗಾದರೆ ಕನ್ನಡ ಶಿಕ್ಷಣದ ಗತಿಯೇನು? ಇಲಾಖೆ ಮಾಡುವ ಸಾಧನೆ ಇದೆಯೇ? ಎಂಬ ಪ್ರಶ್ನೆ ಪಾಲಕರನ್ನು ಕಾಡುತ್ತಿದೆ. ಶಿಕ್ಷಣ ಇಲಾಖೆಯ ಬೇಜವಾಬ್ದಾರಿ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ತಾಲೂಕಿನಲ್ಲಿ ಈಗಾಗಲೇ ಹಲವಾರು ಶಾಲೆಗಳು ಮುಚ್ಚಿ ಹೋಗಿವೆ. ಇರುವ ಶಾಲೆಗಳನ್ನು ಉಳಿಸಿಕೊಳ್ಳಲು, ಶಿಕ್ಷಣ ಇಲಾಖೆಗೆ ಜವಾಬ್ದಾರಿ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಸರಕಾರ ನೀಡಬೇಕಾಗಿದೆ.

 

400ಕ್ಕೂ ಹೆಚ್ಚು ಶಿಕ್ಷಕರು ಇರಬೇಕಾಗಿದ್ದು , ಸಧ್ಯ ತಾಲೂಕಿನಲ್ಲಿ ಗೌರವ ಶಿಕ್ಷಕರೇ ಹೆಚ್ಚಾಗಿದ್ದು ಹಲವಾರು ಶಿಕ್ಷಕರು ನಾಮಕಾವಸ್ಥೆ ಆಗಿದ್ದು, ಸರಕಾರಿ ಶಿಕ್ಷಕರೆಲ್ಲ ಬಿ ಆರ್ ಸಿ, ಸಿ ಆರ್ ಪಿ, ಬಿಸಿಯೂಟ,ಇನ್ನಿತರ ಹುದ್ದೆಯಲ್ಲಿದ್ದಾರೆ. – ಶಿಕ್ಷಣ ಇಲಾಖೆ ಸಧ್ಯ ಗಣತಿ , ಇನ್ನಿತರ ಕೆಲಸದಲ್ಲಿ ಬಿಸಿ ಆಗಿದ್ದು ಇಲ್ಲಿ ಕೂಡ ಕೆಲವರಿಗೆ ಒತ್ತಾಯ ಪೂರ್ವಕ ಜವಾಬ್ದಾರಿ ವಹಿಸಿ ಉಳಿದವರು ಹಾಯಾಗಿದ್ದಾರೆ. ಇದು ತಾಲೂಕಿನ ಶಿಕ್ಷಣ ಇಲಾಖೆಯ ಕಥೆ ಎಂದು ಜನಸಾಮಾನ್ಯರು, ದೂರಿದ್ದಾರೆ.