ಸುದ್ಧಿಕನ್ನಡ ವಾರ್ತೆ
ಪಣಜಿ: ತುಳು ಭಾಷೆ,ಕಲೆ, ಸಂಸ್ಕøತಿ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುತ್ತಿರುವ “ತುಳು ಮಹಾಸಭೆ ಇಂಟರ್ ನ್ಯಾಶನಲ್” ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದೆ. ಈ ಅಂತರಾಷ್ಟ್ರೀಯ ಸಂಘಟನೆಯ ಗೋವಾ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಗೋವಾದ ಹೋಟೆಲ್ ಉದ್ಯಮಿ ಗಣೇಶ ಶೆಟ್ಟಿ ಇರ್ವತ್ತೂರು ರವರು ಆಯ್ಕೆಯಾಗಿದ್ದಾರೆ.

 

2028 ರಲ್ಲಿ ಈ ಅಂತರಾಷ್ಟ್ರೀಯ ಸಂಘಟನೆಯು ತನ್ನ 100 ನೇಯ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ ಸಂಘಟನೆಯ ಮುನ್ನಡೆಸುವ ಜವಾಬ್ದಾರಿ ಗೋವಾದ  ಗಣೇಶ್ ಶೆಟ್ಟಿ  ಇರ್ವತ್ತೂರು ರವರ ಹೆಗಲಿಗೇರಿದೆ.

 

ಹೊರನಾಡ ಗೋವೆಯಲ್ಲಿ ನೆಲೆಸಿರುವ ಗಣೇಶ್ ಶೆಟ್ಟಿ ರವರು ಗೋವಾದಲ್ಲಿರುವ ಕರಾವಳಿಯ ತುಳು ಜನರನ್ನು ಒಗ್ಗೂಡಿಸುವ ಕಾರ್ಯವನ್ನು ಕಳೆದ ಹಲವು ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಪ್ರಸ್ತುತ ತುಳು ಕೂಟ ಗೋವಾ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹೊರ ರಾಜ್ಯ ಗೋವಾದಲ್ಲಿ ತುಳು ಸಂಸ್ಕøತಿ ರಕ್ಷಣೆ ಹಾಗೂ ಸಾಮಾಜಿಕ ಒಳಿತಿಗಾಗಿ ಹತ್ತಾರು ಯಶಸ್ವೀ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದಾರೆ. ಇವರ ಸಂಘಟನಾ ಚಾತುರ್ಯ ಹಾಗೂ ಭಾಷಾಭಿಮಾನದಿಂದಾಗಿ ಇದೀಗ ಇವರ ಹೆಗಲಿಗೆ ಮತ್ತೊಂದು ಜವಾಬ್ದಾರಿ ಬಂದಂತಾಗಿದೆ.