Banner Ad

ಸುದ್ದಿ ಕನ್ನಡ ವಾರ್ತೆ
ಜೋಯಡಾದಲ್ಲಿ ವಿಶೇಷ ಕಾರ್ಯಕ್ರಮ.
ಮಹಾತ್ಮಾ ಗಾಂಧಿಯವರ ಆತ್ಮಕಥೆ, ” ನನ್ನ ಸತ್ಯಾನ್ವೇಷಣೆ” ಗೆ ನೂರು ವರ್ಷಗಳು. ಈ ಸಂದರ್ಭದಲ್ಲಿ ಒಂದು ವಿಶೇಷ *ಸಂವಾದ* ಕಾರ್ಯಕ್ರಮದ ಮೂಲಕ ಸಂಭ್ರಮ ಆಚರಣೆಗೆ ಇಲ್ಲಿಯ ‘ಕಾಳಿ ಬ್ರಿಗೇಡ್ ‘ ಹಾಗು ‘ಸಂಜೀವನಿ ಸೇವಾ ಟ್ರಸ್ಟ್’ ಸಂಘಟನೆ ಗಳು ಮುಂದಾಗಿವೆ.

ಗಾಂಧಿ ಸ್ಮಾರಕ ನಿಧಿ, ಬೆಂಗಳೂರು; ಲೋಹಿಯಾ ಜನ್ಮ ಶತಾಬ್ದಿ ಪ್ರತಿಷ್ಠಾನ, ಶಿವಮೊಗ್ಗ ಹಾಗು ಬಾಪೂಜಿ ಪದವಿಪೂರ್ವ ಕಾಲೇಜು, ಜೋಯಡಾ ಇವರ ಸಂಯುಕ್ತ ಆಶ್ರಯ ದಲ್ಲಿ ಇದೆ ಬರುವ ಸೋಮವಾರ ಜೂನ್ ೨೯ ರಂದು ಮುಂಜಾನೆ ೧೦.೩೦ ಕ್ಕೆ ಬಾಪೂಜಿ ಕಾಲೇಜಿನ ಸಭಾ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕವಯಿತ್ರಿ ಹಾಗು ಸಾಹಿತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತೆ ಸವಿತಾ ನಾಗಭೂಷಣ
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.

Banner Ad

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವನಿ ಸೇವಾ ಟ್ರಸ್ಟ್ ಮತ್ತು ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ರವಿ ರೇಡಕರ್ ವಹಿಸಲಿದ್ದಾರೆ. ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ರೈತರು, ಸಹಕಾರಿ ಸಂಘಗಳು, ವಕೀಲರು, ಪತ್ರಕರ್ತರು, ವ್ಯಾಪಾರಸ್ಥರು, ತಾಲ್ಲೂಕಿನ ಬರಹಗಾರರು ಹೀಗೆ ವಿವಿಧ ಕ್ಷೇತ್ರಗಳಿಂದ ಸುಮಾರು ೫೦ ಕ್ಕಿಂತ ಹೆಚ್ಚು ಪ್ರತಿಭಾವಂತ ರು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

Banner Ad