ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನಲ್ಲಿ ಕಾರ್ಯನಿರ್ವಹಿಸಿ ಉತ್ತಮ ಜನಸ್ನೇಹಿ ಹಾಗೂ ರೌಡಿಶೀಟರ್ ಗಳಿಗೆ ಸಿಂಹಸಪ್ನವಾಗಿದ್ದ ಮಹೇಶ್ ಮಾಳಿ ಅವರು ಹಳಿಯಾಳ ಪೋಲಿಸ್ ಠಾಣೆಯ ನೂತನ ಪಿ ಎಸ್ ಐ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಕೆಲ ದಿನಗಳ ಹಿಂದೆ ಹಳಿಯಾಳ ಬಾರ್ ಒಂದರ ಎದುರು ರೌಡಿ ಶೀಟರ್ ಒಬ್ಬನು ಪೋಲಿಸರ ಸಮವಸ್ತ್ರ ಹಿಡಿದು ಹೊಡೆದು ದಾಂದಲೇ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದನು, ಈ ರೌಡಿ ಶೀಟರ್ ದಾಂದಲೇ ಕಾರಣಕ್ಕಾಗಿ, ವ್ಯವಸ್ಥೆ ಸುಧಾರಣೆ ಆಗುವ ವರೆಗೆದಾಂಡೇಲಿ ಗ್ರಾಮೀಣ ಪಿಎಸ್ಐ ಮಹೇಶ ಮಾಳಿ ಯವರನ್ನು ಹಳಿಯಾಳ ಪಿಎಸ್ಐ ಆಗಿ ನೇಮಕ ಮಾಡಲಾಗಿದೆ.

 

ಇತ್ತೀಚಿಗೆ ಮಹೇಶ ಮಾಳಿ ಅವರನ್ನು ಜೋಯಿಡಾ ದಿಂದ ದಾಂಡೇಲಿ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು
ಜೋಯಿಡಾದಲ್ಲಿಪಿಎಸ್ಐ ಮಹೇಶ ಮಾಳಿ ಅವರು ತಮ್ಮ ಉತ್ತಮ ನಡತೆಯಿಂದ ಹೆಸರು ವಾಸಿಯಾದವರು ಹಳಿಯಾಳ ದಲ್ಲೂ ಕೂಡ ಅವರಿಗೆ ಉತ್ತಮ ಸಹಕಾರ ಸಿಗಲಿ ಎಂದು ಜನತೆ ಹಾರೈಸಿದ್ದಾರೆ.