ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘಟನೆಯ (Goa Union of Journalists (GUJ) ರಾಜ್ಯ ಅಧ್ಯಕ್ಷರಾಗಿ 2026-28 ರ ಅವಧಿಗೆ ರಾಜತಿಲಕ್ ನಾಯಕ್ (Rajtilak Naik) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜತಿಲಕ್ ನಾಯಕ್ ರವರು ಸತತ ನಾಲ್ಕನೇಯ ಅವಧಿಗೆ ಗೋವಾ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.p
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರ ಹತ್ತು ಹುದ್ದೆಗಳಿಗೆ ಅಂತಿಮವಾಗಿ ಗುರುವಾರ ನಾಮಪತ್ರ ಹಿಂತೆಗೆದುಕೊಂಡ ನಂತರ 16 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗೋವಾ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 10 ಸ್ಥಾನಗಳಿಗೆ ಜೂನ್ 27 ರಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12 ರವರೆಗೆ ಪಣಜಿಯ ಪಟ್ಟೋದಲ್ಲಿರುವ ಶ್ರಮ ಶಕ್ತಿ ಭವನದಲ್ಲಿರುವ ಆರನೇ ಮಹಡಿಯಲ್ಲಿರುವ ಕಚೇರಿಯಲ್ಲಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮತದಾನ ನಡೆಯಲಿದೆ.
ಗೋವಾ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೇಯ ದಿನವಾಗಿತ್ತು. ಆದರೆ ಕೊನೇಯ ದಿನದ ವರೆಗೂ ಸಂಘಟನೆಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜತಿಲಕ್ ನಾಯಕ್ ರವರನ್ನು ಹೊರತು ಪಡಿಸಿ ಯಾರೂ ಕೂಡ ನಾಮಪತ್ರ ಸಲ್ಲಿಸದ ಕಾರಣ ಗುರುವಾರ ಅಂತಿಮವಾಗಿ ರಾಜತಿಲಕ್ ನಾಯಕ್ ರವರು ಸತತ ನಾಲ್ಕನೇಯ ಅವಧಿಗೆ ಗೋವಾ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘಟನೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
