ಸುದ್ದಿ ಕನ್ನಡ ವಾರ್ತೆ
ಶಿರಸಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟವು ಬೆಂಗಳೂರಿನಲ್ಲಿ ಮೇ 23ರಿಂದ 25ರವರೆಗೆ ನಡೆಯಿತು. ಈ ಕ್ರೀಡಾಕೂಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪುರುಷರ ವಾಲಿಬಾಲ್ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಬಲಿಷ್ಠ ಬೆಂಗಳೂರು ತಂಡವನ್ನು ಮಣಿಸಿದ ಉತ್ತರ ಕನ್ನಡ ತಂಡ, ವಾಲಿಬಾಲ್ ಆಟದಲ್ಲಿ ತನ್ನ ಮೇಲುಗೈಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ರಾಜ್ಯ ಮಟ್ಟದಲ್ಲಿ ಈಗಾಗಲೇ 12 ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಉತ್ತರ ಕನ್ನಡ ತಂಡವು, ಈ ವರ್ಷವೂ ಹಿರಿಯ ಆಟಗಾರ ಹಾಗೂ ಕೋಚ್ ಅರುಣ್ ವಿ. ಕಾಶಿಭಟ್ ಅವರ ಮಾರ್ಗದರ್ಶನದಲ್ಲಿ ಪ್ರಶಸ್ತಿ ಗೆದ್ದಿದೆ.
ತಂಡದಲ್ಲಿ ರವೀಂದ್ರ ಮಡಿವಾಳ, ಹರ್ಷ ನಾಯಕ, ಕಾರ್ತಿಕ್, ಪ್ರದೀಪ ಗೌಡ, ನವೀನ್ ಕುಮಾ ಆರ್ ಬಿ.ಎನ್., ನಾಗರಾಜ ನಾಯ್ಕ, ಶರತ್ ಹೆಚ್.ಪಿ., ದೇವಿದಾಸ್ ನಾಯಕ, ಪ್ರಶಾಂತ ನಾಯಕ, ದೇವಾನಂದ ಕೆರೆಮನೆ, ಬಿ.ವಿ. ಗಣೇಶ ಹಾಗೂ ಕಿರಣಕುಮಾರ ಜಿ.ಎನ್.ಭಾಗವಹಿಸಿದ್ದರು.

ಉತ್ತರ ಕನ್ನಡ ತಂಡದ ಎಲ್ಲ ಆಟಗಾರರು ಹಾಗೂ ತರಬೇತಿದಾರರನ್ನು ಶಿರಸಿ ಶೈಕ್ಷಣಿಕ ಜಿಲ್ಲೆಯ ಪರವಾಗಿ ಜಿಲ್ಲಾಧ್ಯಕ್ಷ ಕಿರಣ ನಾಯ್ಕ ಹಾಗೂ ಕಾರವಾರ ಜಿಲ್ಲಾ ಸಂಘದ ಅಧ್ಯಕ್ಷ ಸಂಜೀವಕುಮಾರ್ ನಾಯ್ಕ ಅಭಿನಂದಿಸಿದ್ದಾರೆ.