ಸುದ್ದಿ ಕನ್ನಡ ವಾರ್ತೆ
ಮಾನ್ಯ ಹವ್ಯಕ ಬಂಧುಗಳೇ,ಯಲ್ಲಾಪುರದ ಕಾರ್ಮಿಕರ ಭವನದಲ್ಲಿ ರವಿವಾರ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇವರ ಆಶ್ರಯದಲ್ಲಿ ಸಂಸ್ಕಾರೋತ್ಸವ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 6.30 ರಿಂದಲೇ ವಿವಿಧ ಕಾರ್ಯಕ್ರಮ ಗಳು ಆರಂಬವಾಗುತ್ತವೆ, ಆಚಾರ, ವಿಚಾರ, ಆಹಾರ, ವಿಹಾರ, ಸಂಸ್ಕೃತಿ, ಸಂಸ್ಕಾರ ಗಳು ಈ ಕಾರ್ಯಕ್ರಮ ದಲ್ಲಿ ಒಳಗೊಂಡಿವೆ, ಯಲ್ಲಾಪುರ, ಅಂಕೋಲಾ ಮತ್ತು ಜೋಯಿಡಾ ದ ಹವ್ಯಕರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಕ್ಕೆ ಮೆರಗು ನೀಡಲಿದ್ದಾರೆ. ಸಮಾರೋಪ ಸಮಾರಂಭ ದಲ್ಲಿ ಸೋಂದಾ ಸ್ವರ್ಣವಲ್ಲಿ ಮಠದ ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿ ಗಳವರು ದಿವ್ಯ ಸಾನಿದ್ಯ ವಹಿಸಲಿದ್ದು, ಅನೇಕ ಗಣ್ಯರ ಉಪಸ್ಥಿತಿ ಇರುತ್ತದೆ,.
ಕಾರಣ ತಾವೆಲ್ಲರೂ ಬನ್ನಿ ನಮ್ಮೆಲ್ಲರನ್ನು ಕರೆತನ್ನಿ. ಜೊತೆಗೆ,ಮಹಾಸಭೆಯ ನೇತೃತ್ವದಲ್ಲಿ ಈ ವರ್ಷವೂ ಪ್ರತಿಬಿಂಬ ಮತ್ತು ವಿಶೇಷವಾಗಿ ಸಂಸ್ಕಾರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹವ್ಯಕ ಸಂಘಟನೆಯ ದೃಷಿಯಿಂದ ಅಗತ್ಯವೂ ಸರಿ. ಈ ಸಂಸ್ಕಾರೋತ್ಸವದಲ್ಲಿ ಹವ್ಯಕ ಪರಂಪರೆ, ಸಂಸ್ಕೃತಿ, ಮೌಲ್ಯಗಳು ಪ್ರತಿಬಿಂಬಿತವಾಗಬೇಕು. ಆ ಹಿನ್ನೆಲೆಯಲ್ಲಿ ನಾವೆಲ್ಲ ಹವ್ಯಕರು, ಭಾಗವಹಿಸುವ ಪ್ರತಿಯೊಬ್ಬರೂ ನಮ್ಮ ಹವ್ಯಕ ವೇಷ ಭೂಷಣಕ್ಕೆ ಆದ್ಯತೆ ನೀಡಬೇಕು. ಪ್ರತಿಯೊಬ್ಬ ಹವ್ಯಕ ಪುರುಷರು ಬಿಳಿ ಲುಂಗಿ ಮತ್ತು ಶಲ್ಯ ವನ್ನೇ ಧರಿಸಿ ಕಾರ್ಯಕ್ರಮಕ್ಕೆ ಬರಲು ವಿನಂತಿ. ಆಕಸ್ಮಿಕವಾಗಿ ಬಿಳಿ ಲುಂಗಿ ಉಟ್ಟು ಬಾರದಿದ್ದವರಿಗೆ ಅಲ್ಲಿಯೇ ಬಿಳಿ ಲುಂಗಿ, ಶಾಲು ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಬಟ್ಟೆ ತೊಡಲು ಕೋಣೆ ವ್ಯವಸ್ಥೆ ಮಾಡಲಾಗಿದೆ. ಇದನ್ನು ಎಲ್ಲ ಹವ್ಯಕರು ಅನ್ಯಥಾ ಭಾವಿಸದೆ ನಮ್ರವಾಗಿ ಸ್ವೀಕರಿಸಿ, ಸಂಘಟನೆಯ ಶಿಸ್ತಿಗೆ ಕೈಜೋಡಿಸಬೇಕಾಗಿ ಹವ್ಯಕ ಸಂಘಟನೆಯ ಪರವಾಗಿ ವಿಜ್ಞಾಪನೆಗಳು.ದಯವಿಟ್ಟು ಎಲ್ಲರೂ ಬನ್ನಿ 🌹🌹🌹
