Banner Ad

ಸುದ್ದಿ ಕನ್ನಡ ವಾರ್ತೆ

ಶಿರಸಿ ಮೂಲದ ಸೋಂದಾ ದ ಅರ್ಚನಾ ಹೆಗಡೆ ಅವರಿಗೆ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಭಾಷಾ ಮತ್ತು ಸಾಹಿತ್ಯ ವಿಭಾಗದಲ್ಲಿ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

Banner Ad

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ವಿಶ್ವವಿದ್ಯಾಲಯದ 12 ಮತ್ತು 13ನೇ ದೀಕ್ಷಾಂತ ಘಟಿಕೋತ್ಸವದ ಸಂದರ್ಭದಲ್ಲಿ ಈ ಪದವಿಯನ್ನು ಪ್ರದಾನ ಮಾಡಲಾಯಿತು. ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಅವರು ಅರ್ಚನಾ ಹೆಗಡೆ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು
ಡಾ.ಅರ್ಚನಾ ಹೆಗಡೆ ಅವರು “ಸಂಸ್ಕೃತ ಸಾಹಿತ್ಯಕ್ಕೆ ಕಾಶ್ಮೀರ ಕವಿಗಳ ಕೊಡುಗೆ ಮತ್ತು ಐತಿಹಾಸಿಕ ಅಧ್ಯಯನ” ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು.

ಸೋಂದಾ ಗ್ರಾಮದ ಕಲಗದ್ದೆಯ ಗಂಗಾ ಮತ್ತು ಗಜಾನನ ಹೆಗಡೆ ಅವರ ಪುತ್ರಿಯಾಗಿದ್ದಾರೆ. ಅರ್ಚನಾ ಹೆಗಡೆ, ಪ್ರಸ್ತುತ ಬೆಂಗಳೂರಿನ ದೀಕ್ಷಾ ಕಾಲೇಜು, ಜೈನ್ ಕಾಲೇಜು ಹಾಗೂ ಎನ್‌.ಎಂ.ಕೆ.ಆರ್‌.ವಿ. ಬಿ.ಎಡ್. ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹವ್ಯಾಸವಾಗಿ ಭರತನಾಟ್ಯ ಕಲೆಯಲ್ಲಿಯೂ ಆಸಕ್ತಿಯನ್ನು ಹೊಂದಿದ ಜಿಲ್ಲೆಯ ಹೆಮ್ಮೆಯ ಪುತ್ರಿ ಯಾಗಿದ್ದಾರೆ.

Banner Ad