Banner Ad

ಸುದ್ದಿ ಕನ್ನಡ ವಾರ್ತೆ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗುಂಡಬಾಳ ಬಳಿ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಪತ್ತೆಯಾಗಿದೆ. ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಎರಡು ರಾಜಸ್ಥಾನ ಗೀರ ತಳಿಯ ಹೊರಿಗಳು ಹಾಗೂ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

Banner Ad

ಅಂಕೋಲಾ ತಾಲೂಕಿನ ಗುಂಡಬಾಳ ನಿವಾಸಿ ವಿಶ್ವೇಶ್ವರ ಭಟ್ ನೀಡಿದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದರು.
ಬೆಳಗಾವಿ ನೋಂದಣಿ ಹೊಂದಿದ್ದ ಮಹೀಂದ್ರಾ ಬೊಲೆರೊ ವಾಹನದಲ್ಲಿ ಚಿರುಮುರಿ ಚಿಲಗಳ ಮದ್ಯೆ ಎರಡು ರಾಜಸ್ಥಾನ ಗೀರ ತಳಿಯ ಹೊರಿಗಳನ್ನು ಅಮಾನುಷವಾಗಿ ತುಂಬಿಕೊಂಡು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಪರಿಶೀಲನೆ ವೇಳೆ ಹೊರಿಗಳನ್ನು ಕಡಿಮೆ ಜಾಗದಲ್ಲಿ ಕೂರಿಸಿ, ಸುತ್ತಮುತ್ತ ಚಿರಮುರಿ ಚೀಲಗಳನ್ನು ತುಂಬಿ ಕ್ರೂರವಾಗಿ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಜಾನುವಾರುಗಳಿಗೆ ಗಾಯಗಳಾಗಿರುವುದೂ ಪತ್ತೆಯಾಗಿದೆ.
ಘಟನೆಯಲ್ಲಿ ಕಿತ್ತೂರಿನ ಅಪ್ಪಾಸಾಬ್ ಹಾಗೂ ಬೈಲಹೊಂಗಲ ನಿವಾಸಿ ಸಚಿನ್ ಬಸಪ್ಪ ಗಡ್ಡೇದ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪಶುವೈದ್ಯರ ತಂಡ ಗಾಯಗೊಂಡ ಜಾನುವಾರುಗಳಿಗೆ ಚಿಕಿತ್ಸೆ ನೀಡಿದ್ದಾರೆ

ಸಿಪಿಐ ಚಂದ್ರಶೇಖರ ಮಠಪತಿ ಮಾರ್ಗದರ್ಶನದಲ್ಲಿ, ಪಿಎಸ್ಐ ಗುರುನಾಥ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಜಾನುವಾರು ಸಾಗಾಟ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ಪ್ರಕರಣ ದಾಖಲಿಸಲಾಗಿದೆ.

Banner Ad