ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ನದಿ ಜೋಡಣೆ ವಿರೋಧಿಸಿ ಇಂದು ಯ ಲ್ಲಾಪುರದಲ್ಲಿ ಹಮ್ಮಿಕೊಂಡಿರುವ ರಸ್ತೆ ತಡೆಗೆ ಉತ್ತರ ಕನ್ನಡದ ವಿವಿಧ ಭಾಗಗಳಿಂದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

ಶಿರಸಿ ಹಾಗೂ ಸೊಂದ ಭಾಗದಿಂದ ಬೈಕ್ ರ್ಯಾಲಿಯ ಮೂಲಕ ಹೆಚ್ಚಿನ ಜನರು ಪ್ರತಿಭಟನೆಗೆ ಆಗಮಿಸಿದ್ದಾರೆ.

ಬೇಡ್ತಿ ಅಗನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ರಸ್ತೆ ತಡೆ ಸಂಚಾಲನಾ ಸಮಿತಿ ಹಮ್ಮಿಕೊಂಡಿರುವ ಈ ಬೃಹತ್ ಪ್ರತಿಭಟನೆಗೆ ಉತ್ತರ ಕನ್ನಡದ ವಿವಿಧ ಭಾಗಗಳಿಂದ ಹಳ್ಳಿ ಹಳ್ಳಿಗಳಿಂದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.

ಪಟ್ಟಣದ ಎಲ್ಲೆಡೆ ಸಂಪೂರ್ಣ ಕೇಸರಿ ಮಯವಾಗಿ ಕಂಡುಬರುತ್ತದೆ.