ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಡಾ/. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತದೆ. ಅದರಂತೆ ಶಿಕ್ಷಕರನ್ನು ಗೌರವಿಸುವ ಕೆಲಸ ಕೂಡ ಮಾಡಲಾಗುತ್ತದೆ.
ಈ ವರ್ಷದ ಶಿಕ್ಷಕರ ದಿನಾಚರಣೆ ಶುಭ ಸಂದರ್ಭದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯು ಜೊಯಿಡಾ ತಾಲೂಕಿನಿಂದ ಮೂವರು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರು ಎಂದು ಗುರುತಿಸಿ ಗೌರವಿಸುತ್ತಿದೆ .

ಕಿರಿಯ ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ಕುಂಬಾರವಾಡ ಗ್ರಾಮ ಪಂಚಾಯತದ ಕೊಂದರ ಶಾಲೆಯ ಈರಣ್ಣ ಪಗಡಿ ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಹಿರಿಯ ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿರಾಮನಗರ ಗ್ರಾಮ ಪಂಚಾಯತ್ ದ ರಾಮನಗರ ಮಾದರಿ ಶಾಲೆಯ ಶಿಕ್ಷಕಿ ವಿದ್ಯಾ ಸೀತಾರಾಮ ದೇಸಾಯಿ ಆಯ್ಕೆಯಾದರೆ ಪ್ರೌಢ ಶಾಲೆಗಳ ವಿಭಾಗದಲ್ಲಿ ಅಖೇತಿ ಗ್ರಾಮ ಪಂಚಾಯತದ ತಿನೈಘಾಟ ಸರಕಾರಿ ಪ್ರೌಢ ಶಾಲೆಯ ಬಾಬು ತಾರಸಿಂಗ ಚವ್ಹಾಣ ರನ್ನು ಆಯ್ಕೆ ಮಾಡಲಾಗಿದೆ.ಹೀಗೆ ಜೋಯಿಡಾ ತಾಲೂಕಿನ ಮೂವರು ಶಿಕ್ಷಕರಿಗೆ ಈ ಸಲದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರು ಎಂಬ ಪ್ರಶಸ್ತಿ ಶಿಕ್ಷಣ ಇಲಾಖೆಯಿಂದ ದೊರೆತಿದೆ.

ಜೊಯಿಡಾ ತಾಲೂಕಿನಲ್ಲಿ ಸೇವೆ ಸಲ್ಲಿಸುವ ಶಿಕ್ಷಕರ ಕಷ್ಟದ ಪರಿಸ್ಥಿತಿ ತುಂಬಾ,ಅಂಥದರಲ್ಲಿ ಪ್ರತಿ ವರ್ಷ ಈ ರೀತಿ ಶಿಕ್ಷರನ್ನು ಗುರುತಿಸಿ ಗೌರವಿಸುವುದು ಸಮಾಜಕ್ಕೆ ಕೊಡುವ ಉತ್ತಮ ಸಂದೇಶವಾಗಿದೆ.