Banner Ad

ಸುದ್ಧಿಕನ್ನಡ ವಾರ್ತೆ

ಯಲ್ಲಾಪುರ:  ಯಲ್ಲಾಪುರ ತಾಲೂಕಿನ ಅರಬೈಲ್ ಸಮೀಪದ ಮೂಲೆಪಾಲ್ ನ ಗಿರೀಶ ಭಟ್ ಎಂಬುವವರ ತೋಟದಲ್ಲಿ ಕಾಣಿಸಿಕೊಂಡ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ಸ್ನೇಹಿ ಸ್ನೇಕ್ ಸೂರಜ್ ಸೆರೆಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದರು.

Banner Ad

ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕೆಲಸಗಾರರಿಗೆ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದಾಗ ಅವರು ಸ್ನೇಕ್ ಸೂರಜ್ ನ ಸಹಾಯ ಪಡೆದು ಕಾಳಿಂಗ ಸರ್ಪವನ್ನು ರಕ್ಷಿಸಿದ್ದಾರೆ.

ವಿಶೇಷತೆ ಎಂದರೆ ಇದು ಸೂರಜ್ ನ 15 ನೇ ಕಾಳಿಂಗ ಸರ್ಪದ ಯಶಸ್ವಿ ರಕ್ಷಣಾ ಕಾರ್ಯಾಚರಣೆ ಆಗಿದೆ. ಈ  ಕಾರ್ಯಾಚರಣೆಯಲ್ಲಿ ಹರೀಶ ಮಡಿವಾಳ, ಚಂದ್ರಕಾಂತ ನಾಯ್ಕ, ಗೋಪಾಲ ಗೌಡ, ಸೋಮಶೇಖರ್ ನಾಯ್ಕ ಸಹಕರಿಸಿದರು.

Banner Ad