Banner Ad

ಸುದ್ಧಿಕನ್ನಡ ವಾರ್ತೆ

Goa: ಪ್ರಸಕ್ತ ವರ್ಷ ಗೋವಾದಲ್ಲಿ 55 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಆಯೋಜನೆ ಮಾಡಲಾಗುತ್ತಿದೆ. ಈ ಚಲನಚಿತ್ರ ಮಹೋತ್ಸವ ನವೆಂಬರ್ 20 ರಿಂದ 28 ರ ವರೆಗೆ ನಡೆಯಲಿದೆ. ಜಗತ್ತಿನೆಲ್ಲೆಡೆಯಿಂದ ಕಲಾ ಪ್ರೇಮಿಗಳು ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಪ್ರತಿನಿಧಿಗಳ ಆನ್ ಲೈನ್ ನೋಂದಣಿ ಆರಂಭಗೊಂಡಿದೆ.

Banner Ad

ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವಕ್ಕೆ (IFFI) ಪ್ರತಿನಿಧಿಯಾಗಿ ನೋಂದಣಿ ಮಾಡಿಕೊಂಡ ನಂತರ ಚಲನಚಿತ್ರ ಮಹೋತ್ಸವದಲ್ಲಿ ಸ್ಕ್ರೀನಿಂಗ್ ವೀಕ್ಷಿಸುವ ಅವಕಾಶ ಲಭಿಸಲಿದೆ. ಜಗತ್ತಿನಲ್ಲೇ ಅತಿದೊಡ್ಡ ಚಲನಚಿತ್ರ ಮಹೋತ್ಸವ ಇದಾಗಿದ್ದು, ಈ ಮಹೋತ್ಸವ ಗೋವಾ ರಾಜಧಾನಿ ಪಣಜಿಯಲ್ಲಿ ನಡೆಯಲಿದೆ.

ಗೋವಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ  (IFFI) ವಿವಿಧ ದೇಶಗಳ ಆಯ್ದ ಚಲನಚಿತ್ರ ಪ್ರದರ್ಶನ ನಡೆಯಲಿದೆ. ನವೆಂಬರ್ 20 ರಂದು ಸಂಜೆ ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವದ ಉಧ್ಘಾಟನಾ ಸಮಾರಂಭ ಪಣಜಿ ಸಮೀಪದ ತಾಲಿಗಾಂವ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂ ನಲ್ಲಿ ನಡೆಯಲಿದೆ.

Banner Ad