ಸುದ್ದಿ ಕನ್ನಡ ವಾರ್ತೆ
ಹಳಿಯಾಳ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಮಂಗಳವಾಡ ಈ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 100 ಶೇಕಡ ಫಲಿತಾಂಶದ ಸಾಧನೆ ಮಾಡಿದೆ.
ಪರೀಕ್ಷೆಗೆ ಹಾಜರಾದ 58 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 37 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 9 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
86% ಗುಣಾತ್ಮಕ ಫಲಿತಾಂಶದೊಂದಿಗೆ A ಗ್ರೇಡ್ ಪಡೆದಿರುತ್ತದೆ.
ಕು. ಸಮರ್ಥ ಓಮಣ್ಣ ಕದಂ ಪ್ರಥಮ ಸ್ಥಾನ (590ಅಂಕ ),
ಕು. ಪವಿತ್ರ ಅರ್ಜುನ ಘಾಡಿ (581 ಅಂಕ )& ಕು.ಲಕ್ಷ್ಮಿ ಮಂಜುನಾಥ ಗಂಧಿಟ್ಕರ್ ದ್ವಿತೀಯ ಸ್ಥಾನ (581 ಅಂಕ ),
ಕು. ವಿನಾಯಕ ರಘುನಾಥ ಶಿಂಧೆ ತೃತೀಯ ಸ್ಥಾನ (577 ಅಂಕ ) ಪಡೆದಿರುತ್ತಾರೆ.
ತೃತೀಯ ಭಾಷೆ ಹಿಂದಿಯಲ್ಲಿ 8 ವಿದ್ಯಾರ್ಥಿಗಳು 100 ಪ್ರತಿಶತ ಅಂಕ ಪಡೆದರೆ, ಗಣಿತದಲ್ಲಿ ಒಬ್ಬ ವಿದ್ಯಾರ್ಥಿಯನ್ನು ಹೊರತುಪಡಿಸಿ 58 ವಿದ್ಯಾರ್ಥಿಗಳು ಪ್ರಥಮ ದರ್ಜೆಯ ಅಂಕ ಪಡೆದಿರುವುದು ವಿಶೇಷವಾಗಿರುತ್ತದೆ.
ಈ ರೀತಿ ಅತ್ಯುತ್ತಮ ಫಲಿತಾಂಶವನ್ನು ನೀಡಿ ಶಾಲೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶನ ಮಾಡಿದ ಶಿಕ್ಷಕ ವೃಂದವನ್ನು ಹಳಿಯಾಳ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಪ್ರಮೋದ್ ಮಹಾಲೆ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರಾಜೇಶ್ವರಿ ನಾಯಕ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಲೂವೀಸಾ & ಸರ್ವಸದಸ್ಯರು, ಶಾಲೆಯ ಪಾಲಕ ವೃಂದ,ಊರ ನಾಗರಿಕರು ಅಭಿನಂದಿಸಿ ಶುಭಹಾರೈಸಿದ್ದಾರೆ.
