Banner Ad

ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ಇತ್ತೀಚೆಗೆ ಅರಬೈಲ್ ಘಟ್ಟದಲ್ಲಿ ಕಾರು ಸುಟ್ಟು ಕರಕಲಾಗಿ ಓರ್ವ ದಹಿಸಿಹೋದ ಘಟನೆ ಈಗ ಕೊಲೆ ಪ್ರಕರಣವೆಂದು ತಿರುವು ಪಡೆದಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆ ವ್ಯಕ್ತಿಯನ್ನು ಹತ್ಯೆಗೈದು, ಕಾರಿನೊಂದಿಗೆ ಸುಟ್ಟು ಸಾಕ್ಷ್ಯನಾಶ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಇಲ್ಲಿಯ ಪೊಲೀಸರು ಬಂಧಿಸಿದ್ದಾರೆ.

Banner Ad

ಈ ಘಟನೆಯಲ್ಲಿ ಬೆಳಗಾವಿ ಮೂಲದ ನಿತೀಶ್ ದಾಪಲೆ (35) ಇವರನ್ನು ಕೊಲೆ ಮಾಡಲಾಗಿದ್ದು ಹುಬ್ಬಳ್ಳಿ ಮೂಲದ ಮೌಲಾಸಾಬ್ (36) ಹಾಗೂ ದಾದಾಪೀರ್ ಅಪ್ತಾಬ್ (22),ಅಬ್ದುಲ್ ನಹೀಮ್ (32),ರ
ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏಪ್ರಿಲ್ 8 ರಂದು ಮುಂಜಾನೆ ರಾ.ಹೆದ್ದಾರಿ ಅರಬೈಲ್ ಘಟ್ಟದ ತಾಳಿಕುಂಬ್ರಿ ಬಸ್ ನಿಲ್ದಾಣದ ಎದುರು ಕಾರೊಂದು ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾಗಿ ಕಾರಿನೊಳಗಿದ್ದ ವ್ಯಕ್ತಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರಿಂದ ಅಪಘಾತವೆಂದು ಭಾವಿಸಲಲಾಗಿತ್ತು.

ಆನಂತರ ಆದರೆ ಮೃತನ ತಂದೆ ಜಗನ್ನಾಥ್ ಬಾಪಲೆ ಚಂದ್ರಮೌಳಿನಗರ ಬೆಳಗಾವಿ ಅವರು ಈ ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಇದು ಅಪಘಾತವಲ್ಲ, ಕೊಲೆ ಎಂದು ದೂರು ನೀಡಿದ್ದರು. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ತನಿಖೆ ತೀವ್ರಗೊಳಿಸಿ ಪ್ರಕರಣದ ಬೇಧಿಸಿದರು.
ಸಿಪಿಐ ರಮೇಶ್ ಹನಾಪೂ‌ರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಕೃತ್ಯಕ್ಕೆ ಬಳಸಿದ್ದ ಬಲೆನೊ ಕಾರು, ಬರ್ಗ್‌ ಮ್ಯಾನ್ ಹಾಗೂ ಆಕ್ಟಿವಾ ಸ್ಕೂಟರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

Banner Ad