Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಕಟ್ಟಿಗೆ ಗ್ರಾಮದ ಬೊಳತಗ್ಗಿನ ಕೃಷ್ಣ ಮತ್ತು ಶಿರಸಿ ಬಾಳೇಹಳ್ಳಿ ಗ್ರಾಮದ ಜಡ್ಡಿಯ ಪವಿತ್ರಾ ಅವರ ವಿವಾಹ ಸಮಾರಂಭವು ಸಡಗರ ಹಾಗೂ ಸಂಭ್ರಮದಿಂದ ನೆರವೇರಿತು. ಬಂಧು-ಬಳಗ, ಸ್ನೇಹಿತರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಈ ಮಂಗಳಕಾರ್ಯ ಇತ್ತೀಚೆಗೆ ಭವ್ಯವಾಗಿ ಜರುಗಿತು.

ವಿವಾಹ ವೇದಿಕೆಯನ್ನು ಆಕರ್ಷಕವಾಗಿ ಅಲಂಕರಿಸಲಾಗಿದ್ದು, ಹೂವಿನ ಅಲಂಕಾರ ಹಾಗೂ ಬೆಳಕಿನ ಶೃಂಗಾರ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಪ್ರವೀಣ ವೇಳಿಪ ಅವುರ್ಲಿ(ಜೋಯಿಡಾ)ಸಂಗಡಿಗರ ಗಾಯನ,ವಾದ್ಯ ಸಂಗೀತ ವಿಶೇಷ ಮೆರುಗನ್ನು ನೀಡಿತು.ನೂತನ ದಂಪತಿಗೆ ಆಗಮಿಸಿದ ಅತಿಥಿಗಳು ಶುಭಾಶಯಗಳನ್ನು ತಿಳಿಸಿ, ಆಶೀರ್ವದಿಸಿ,ಉಡುಗೊರೆಯನ್ನು ನೀಡಿ ಅವರ ದಾಂಪತ್ಯ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಕುಟುಂಬದ ಹಿರಿಯರು, ಸಮಾಜದ ಗಣ್ಯರು ಹಾಗೂ ಅತಿಥಿಗಳು ಉಪಸ್ಥಿತರಿದ್ದು, ವಿವಾಹ ಸಮಾರಂಭದ ಯಶಸ್ಸಿಗೆ ಸಾಕ್ಷಿಯಾದರು.

Banner Ad

ಸಮಾರಂಭದಲ್ಲಿ ಪಾನೀಯ,ಅಚ್ಚುಕಟ್ಟಾದ ಭೋಜನ ವ್ಯವಸ್ಥೆಯೂ ಮಾಡಲಾಗಿತ್ತು.ಈ ಮದುವೆ ಸಮಾರಂಭವು ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.

Banner Ad