ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಸೋಮವಾರ ತಾಲೂಕಾ ಕೇಂದ್ರ ಜೋಯಿಡಾ ದಲ್ಲಿ ಇಂದು ಯಲ್ಲಾಪುರ ತಾಲೂಕಿನ ಕಳಚೆಯ ಸಹ್ಯಾದ್ರಿ ವಿವಿದೊದ್ದೇಶ ಕೃಷಿ ಸಹಕಾರಿ ಸಂಘದ ವ್ಯಾಪಾರಿ ಜೋಯಿಡಾ ಶಾಖೆ ಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟನೆ ಮಾಡಿ ಮಾತನಾಡುತ್ತಾ ಸಾವಯವ ತಾಲೂಕಿನಲ್ಲಿ ಇದು ಉತ್ತಮ ಕೆಲಸ ಜೋಯಿಡಾ ದ ರೈತರಿಗಾಗಿ ಕಳಚೆಯ ಸಹಕಾರಿ ಸಂಘದವರು ಮಾಡಿದ ಈ ಕಾರ್ಯ ವನ್ನು ನಾನು ಸ್ವಾಗತಿಸುತ್ತೇನೆ ಮತ್ತು ಅವರನ್ನು ಅಭಿನಂದಿಸುತ್ತೇನೆ ಈ ಮೊದಲೇ ಈ ಕೆಲಸ ವನ್ನು ಯಾರಾದರೂ ಮಾಡಬೇಕಿತ್ತು, ಈಗಲಾದರೂ ಆಗಿದೆ ತಾಲೂಕಿನ ಎಲ್ಲ ಕೃಷಿಕರು ಸಹಕಾರಿ ಸಂಘದವರು ಸಹಕಾರ ನೀಡಿ, ನಿಮ್ಮ ಅಡಿಕೆ ಕಾಳು ಮೆಣಸು ತೆಂಗಿನಕಾಯಿ ಗಳನ್ನು ತಂದು ಲಾಭ ಪಡೆದು ಕೊಳ್ಳಿ, ದೂರದ ಯಲ್ಲಾಪುರ ಕ್ಕೆ ಹೋಗಿ ಬರುವ ಖರ್ಚು ಉಳಿಸಿ ಕೊಳ್ಳಿ, ಎಂದು ಹೇಳುತ್ತಾ ತಾಲೂಕಿನ ಇತಿಹಾಸದಲ್ಲಿ ಇದು ನೆನಪಿಡುವಂತ ದಿನ ಎಂದರು,

ತಾಲೂಕಿನ ಹಲವಾರು ವಿಷಯ ಗಳಿಗೆ ಸ್ಪಂದಿಸುತ್ತ ರೈತರ ಬೆಳೆವಿಮೆ ಈ ವರ್ಷವೂ ತಂದೇ ತರುತ್ತೇನೆ ರಾಜ್ಯ ಸರಕಾರದ ಹಲವಾರು ಅಡೆ ತಡೆ ಇದ್ದರೂ ಕೇಂದ್ರ ಸರಕಾರ ರೈತರ ಪರವಾಗಿ ಹಲವು ಯೋಜನೆ ಗಳನ್ನು ತಂದಿದೆ ಅದರ ಸದುಪಯೋಗ ಪಡೆದು ಕೊಳ್ಳಿ ರಾಜ್ಯ ಸರಕಾರ ಕೂಡ ಕೇಂದ್ರದ ಯೋಜನೆ ಗಳು ರೈತರಿಗೆ ತಲುಪಲು ಸಹಕಾರ ನೀಡಿ ಸಹಕರಿಸ ಬೇಕು ಎಂದರು,ಬಿ ಎಸ್ ಎನ್ ಎಲ್ ಟವರ್ ಮತ್ತು ಸಂಪರ್ಕ್ ಸಮಸ್ಯೆಗಳು ಪರಿಹಾರಕ್ಕೆ ಪ್ರಯತ್ನ ನಡೆಯುತ್ತಲೇ ಇದೆ, ಇನ್ನೂ ಬೇಕಾದರೂಟವರ್ ಕೊಡುತ್ತೇವೆ ಎಂದರು ಈ ಸಂದರ್ಭದಲ್ಲಿ ಕೆ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಾ ದೇಸಾಯಿ ಮಾಜಿ ಶಾಸಕ ಸುನೀಲ್ ಹೆಗಡೆ, ಆರ್ ವಿ ದಾನಗೇರಿ ಇತರರು ಮಾತನಾಡಿದರು ಸಂಘದ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಸ್ವಾಗತಿಸಿದರು, ಪ್ರಸ್ತಾವಿಕ ವಾಗಿ ಸಂಘದ ಅಧ್ಯಕ್ಷ ಉಮೇಶ ಭಾಗವತ, ಮಾತನಾಡುತ್ತ ಉದ್ದೇಶ ಗಳನ್ನು ವಿವರಿಸಿ ಸಂಘ ಬೆಳೆದು ಬಂದ ಹಾದಿಯನ್ನು ತಿಳಿಸಿದರು, ವ್ಯಾಪಾರಿ ಕೌಂಟರ್ ಉದ್ಘಾಟನೆ ಯನ್ನು ಕೆ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಾ ದೇಸಾಯಿ, ಮಾಡಿದರು,ಅಡಿಕೆ ಹಾಕಿದವರಿಗೆ ಪಾವತಿ, ಕ್ಯಾಶ್ ಸರ್ಟಿಫಿಕೇಟ್ ಗಳನ್ನು ವಿತರಿಸಲಾಯಿತು ಆಡಳಿತ ಮಂಡಳಿಯ ಸದಸ್ಯರು ಜೋಯಿಡಾ ದ ಬಾಜಪಾ ಗಣ್ಯರು ಇತರರು ಉಪಸ್ಥಿತರಿದ್ದರು .