Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ; ಜಿಲ್ಲೆಯ ಹಿಂದುಳಿದ ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆ ಅನೇಕ ವರ್ಷದಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿ ಆದಷ್ಟು ಬೇಗ ಕ್ರಮವಹಿಸಲು ಜಿಲ್ಲಾ ಕುಣಬಿ ಸಮಾಜದಿಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರವರಿಗೆ ಮನವಿ ನೀಡಲಾಯಿತು. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಭರವಸೆ ನೀಡಿದರು.

Banner Ad

ಕಳೆದ 20 ವರ್ಷಗಳಿಂದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಯತ್ನ ನಡೆದಿದೆ. 2003 ರಲ್ಲಿ ನೆರೆಯ ಗೋವಾ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಪಾದಯಾತ್ರೆ, ಉಪವಾಸ ಸತ್ಯಾಗ್ರಹ ಸೇರಿದಂತೆ ಅನೇಕ ಹೋರಾಟ ಮಾಡಿದರು ಪ್ರಯೋಜನವಾಗಿಲ್ಲ. ಅನೇಕ ಸಲ ದೇಹಲಿ ನಿಯೋಗ ಹೋಗಲಾಗಿದೆ. ಆದಷ್ಟು ಬೇಗ ಕುಣಬಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ತಕ್ಷಣ ಕೇಂದ್ರ ಸರ್ಕಾರ ಅಧಿನದಲ್ಲಿ ಬರುವ ಆರ್ ಜಿ ಐ ಗೆ ಪತ್ರ ಬರೆಯುವುದು ಮತ್ತು ಸಂಬಂಧ ಪಟ್ಟವರಿಗೆ ಮಾತನಾಡಿ ಕುಣಬಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆದಷ್ಟು ಬೇಗ ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ್ ಗಾವಡಾ, ತಾಲ್ಲೂಕು ಅಧ್ಯಕ್ಷ ಪ್ರೇಮಾನಂದ ವೇಳಿಪ, ಉಪಾಧ್ಯಕ್ಷ ಕೃಷ್ಣಾ ಮಿರಾಶಿ, ಖಜಾಂಚಿ ಚಂದ್ರಶೇಖರ ಸಾವರಕರ್, ದಯಾನಂದ ಕುಮಗಾಳಕರ, ಪ್ರಮೂಖರಾದ ಅಜಿತ್ ಮಿರಾಶಿ, ಪ್ರಸನ್ನ ಗಾವಡಾ, ಸುಭಾಷ ವೇಳಿಪ, ಮಾಜಿ ಶಾಸಕ ಸುನಿಲ್ ಹೆಗಡೆ, ಶಿವಾಜಿ ಗೋಸಾವಿ, ಆರ್ ವಿ ದಾನಗೇರಿ, ಅನಿಲ್ ಪಟ್ಟೆ, ಪ್ರದೀಪ್ ದೇಸಾಯಿ ಮುಂತಾದವರು ಇದ್ದರು.

Banner Ad