ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ಗುರುವಾರ ಸಂಜೆ ದಾಂಡೇಲಿ ಇಂದ ಸಿರ್ಸಿ .ಉಳವಿ ಬಸ್ ಜೋಯಿಡಾ ತಾಲೂಕಿನ ಕೈಟಾ ಸೇತುವೆಯ ಬಳಿ ಬಂದಾಗ , ಅಲ್ಲಿ ಪಾನಮತ್ತ ರಾಗಿ ಇರುವ, ಡಿ ಜೆ ಹಚ್ಚಿಕೊಂಡು ಕುಣಿ ಯುತ್ತಿರುವ ಯುವಕರ ಗುಂಪೊಂದು , ಬಸ್ ಅನ್ನು ಅಡ್ಡಗಟ್ಟಿದ್ದು ಅಲ್ಲದೇ , ಬಸ್ ನಲ್ಲಿರುವ ಪ್ರಯಾಣಿಕರ ಮೇಲೆ ಹಲ್ಲೆಗೆ ಮುಂದಾದ ಘಟನೆ ನಡೆದಿದೆ. ಧರೋಡೆ ವೇಷದಲ್ಲಿರುವವರ ಕಿರಿಕ್ ನಿಂದಾಗಿ ಬಸ್ ಸ್ವಲ್ಪದರಲ್ಲೇ ಕೈಟಾ ನಾಲಾಕ್ಕೆ ಊರುಳುವುದು ತಪ್ಪಿ ಬಸ್ ನಲ್ಲಿರುವ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಕ್ಕಾಲು ಗಂಟೆ ತಡೆ ಮಾಡಿದ ಈ ತಂಡ ದಿಂದ ಹೇಗೂ ತಪ್ಪಿಸಿ ಕೊಂಡು ಬಂದಿದ್ದೇವೆ ಎಂದು ಪ್ರಯಾಣಿಕರು ದೂರಿದ್ದಾರೆ ಬಸ್ ನಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಹಲವಾರು ಜನರು ಕೂಡ ಪ್ರಯಾಣ ಮಾಡುತ್ತಿದ್ದರು , ಡಿ ಜೆ ಹಚ್ಚಿ ಕಂಠ ಪೂರ್ತಿಯಾಗಿ ಕುಡಿದು ದಾಂದಲೇ ಮಾಡುವವರನ್ನು ಅರಣ್ಯ ಇಲಾಖೆ ಯಾಕೆ ರಾತ್ರಿ ವೇಳೆಯಲ್ಲಿ ಒಳಗೆ ಬಿಟ್ಟಿದೆ ಎಂದು ತಿಳಿದಿಲ್ಲ ಅಲ್ಲೇ500 ಮೀಟರ್ ಪಕ್ಕದಲ್ಲಿ ಅರಣ್ಯ ಇಲಾಖೆ ಯ ಕಾವಲು ಕೇಂದ್ರ ವಿದೆ, ಆದರೂ ಅವರು ಬಂದು, ಮೋಜು ಮಸ್ತಿ ಮಾಡುವವರನ್ನು ಯಾಕೆ ತಡೆದಿಲ್ಲ, ಸ್ಥಳೀಯ ಜನತೆಗೆ ವೇಳೆ ಹೇಳುವ ಅರಣ್ಯ ಇಲಾಖೆ ಮೋಜು ಮಸ್ತಿ ಮಾಡುವವರನ್ನು ಒಳಗೆ ಇಟ್ಟು ಕೊಂಡ ಕಾರಣ ವನ್ನು ಇಲಾಖೆ ಗ್ರಾಮಸ್ಥರಿಗೆ ತಿಳಿಸಬೇಕು. ಬಸ್ ನಲ್ಲಿರುವ ಪ್ರಯಾಣಿಕರು ತಮ್ಮ ಮನೆಗಳಿಗೆ ಹೋಗುವ ಗಡಿಬಿಡಿ ಯಲ್ಲಿ ಇರುತ್ತಾರೆ, ಕೆಲವರು ಊರಿಗೆ ಹೊಸಬರು ಇರುತ್ತಾರೆ, ಹಾಗಾಗಿ ದರೋಡೆ ಯಂತವರ ಗ್ಯಾಂಗ್ ಹತ್ತಿರ ಯಾರೂ ಬರೋದಿಲ್ಲ, ಇದಕ್ಕೆಲ್ಲ ಅರಣ್ಯ ಇಲಾಖೆಯವರು ಉಳವಿ ಮತ್ತು ಫೋಟೋಲಿ ಗೇಟ್ ನಲ್ಲಿ ಹೊರಗಿನ ಪ್ರವಾಸಿಗರಿಗೆ ಒಳಗೆ ಬಿಟ್ಟಲ್ಲಿ ಅವರು ಇನ್ನೊಂದು ಗೇಟ್ ನಿಂದ ಪಾಸಾದರೆ ಎಂದು ಖಾತ್ರಿ ಪಡಿಸಿ ಕೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. ಈ ಡಿಜೆ ಗ್ಯಾಂಗ್ ರಂಪಾಟ ದಿಂದಾಗಿ ಬಸ್ ನಂದಿಗದ್ದೆಗೆ ತಲುಪಲು ಮುಕ್ಕಾಲು ಘಂಟೆ ತಡವಾಗಿದೆ.

 

ಈ ಘಟನೆ ಒಂದು ರೀತಿಯ ಆತಂಕವನ್ನು ಮೂಡಿಸಿದ್ದು , ನಾವು ರಾತ್ರಿ ಪ್ರಯಾಣವನ್ನು ಮಾಡಲು ಹೆದರುವಂತಾಗಿದೆ. ಎಂದು ಸಾರ್ವಜನಿಕರು ದೂರಿದ್ದಾರೆ,,,,, ತಾಲೂಕಾ ದಂದಾಧಿಕಾರಿಗಳು ಮತ್ತು ಜೋಯಿಡಾ ಪಿಎಸ್ಐ ಅವರು ಈ ಬಗ್ಗೆ ಅರಣ್ಯ ಇಲಾಖೆ ಯೊಂದಿಗೆ ಮಾತಾಡಿ ಗ್ರಾಮಸ್ಥರಿಗೆ ಊರಿಗೆ ಹೋಗಲು,ಬರಲು ತೊಂದರೆ ಆಗದಂತೆ ನೋಡಿಕೊಂಡು, ಸಾರಿಗೆ ವಾಹನ ಗಳಿಗೆ ಓಡಾಡಲು ತೊಂದರೆ ಮಾಡುವವರನ್ನು ಗಮನಿಸಿ ಕೊಳ್ಳುವಂತೆ, ತಿಳಿಸಬೇಕಾಗಿ ಕೇಳಿಕೊಂಡಿದ್ದಾರೆ.