Banner Ad

ಸುದ್ದಿ ಕನ್ನಡ ವಾರ್ತೆ

ಕನಕಗಿರಿ: ತಾಲೂಕಿನ ನವಲಿ ಗ್ರಾ. ಪಂ. ವ್ಯಾಪ್ತಿಯಲ್ಲಿ ನಾನಾ ಕಾಮಗಾರಿಗಳಿ ಭೂಮಿ ಪೊಜೆ ನೇರವರಿಸಿ ತೆರುಳುತ್ತಿದ್ದಾಗ ಸಂಕನಾಳ ಗ್ರಾಮದ ಮಹಿಳೆಯರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಾಹನಕ್ಕೆ ಮುತ್ತಿಗೆ ಹಾಕಿದ ಘಟನೆ ಬುಧವಾರ ನಡೆದಿದೆ. ಗ್ರಾಮದಲ್ಲಿ ಕಡಿವ ನೀರಿಲ್ಲ ನವಲಿ ಗ್ರಾ.ಪಂ.ಪಿಡಿಓ ನಿರ್ಲಕ್ಷ್ಯ ವಹಿಸಿದ್ದಾರೆ. ಬೇಸಿಗೆ ತೀವ್ರವಾಗಿದ್ದು, ನೀರಿಗಾರಿ ಪರದಾಡಬೇಕಿದೆ ಎಂದು ಖಾಲಿಕೊಡದೊಂದಿಗೆ ಸಚಿವ ಶಿವರಾಜ ತಂಗಡಗಿ ಅವರ ಕಾರಿಗೆ ಮಹಿಳೆಯರು ಮುತ್ತಿಗೆ ಹಾಲಿ ನೀರು ಕೊಡಿ ಎಂದು ಆಗ್ರಹಿಸಿದರು.

Banner Ad

ಈ ಗ್ರಾಮದಲ್ಲಿ ನೂರಕ್ಕು ಹೆಚ್ಚು ಮನೆಗಳಿದ್ದು, ಗ್ರಾಮೀಣ ಭಾಗದಲ್ಲಿ ತೀವ್ರಗೊಂಡಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಳಲು ತೊಡಗಿಕೊಂಡರು.
ಗ್ರಾಮಸ್ಥರಾದ ಅಕ್ಕ ನಾಗಮ್ಮ, ನಾಗರಾಜ, ಪಂಪಾಪತಿ, ಶಂಕ್ರಪ್ಪ, ಬಿರನಗೌಡ, ಶರಣಪ್ಪ, ನೀಲಮ್ಮ, ಪಾರ್ವತಿ, ಮಲ್ಲಮ್ಮ, ಕಮಲಾಕ್ಷಿ, ಚಂದ್ರಮ್ಮ, ಬಸವರಾಜ ಇದ್ದರು.

Banner Ad