ಸುದ್ದಿ ಕನ್ನಡ ವಾರ್ತೆ
48 ಆಸನದ ಸಾಮರ್ಥ್ಯವಿರುವ  ಬಸ್ಸಿನಲ್ಲಿ ಸುಮಾರು 140 ಕಾರ್ಮಿಕರನ್ನು ಕೂರಿಸಿಕೊಂಡು ನೇಪಾಳ ಮತ್ತು ಉತ್ತರ ಪ್ರದೇಶ ಕ್ಕೆ ತೆರಳುತ್ತಿದ್ದ ಬಸ್ ಅನ್ನು ಗೋವಾ ಟ್ರಾಫಿಕ್ ಪೊಲೀಸ್ ತಡೆಹಿಡಿದು ಬಸ್ಸಿನ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಈ ಘಟನೆಯು ಗೋವಾದ ಮಾಪುಸ ಪಟ್ಟಣದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಗೋವಾದ ವಿವಿಧಡೆ ಕೆಲಸ ಮಾಡುತ್ತಿದ್ದ ನೇಪಾಳ ಮತ್ತು ಉತ್ತರ ಪ್ರದೇಶ ಮೂಲದ ಕಾರ್ಮಿಕರು ದೀಪಾವಳಿ ಹಬ್ಬಕ್ಕಾಗಿ ತಮ್ಮ ಊರುಗಳಿಗೆ ತೆರಳುವವರಿದ್ದರು. ಇದಕ್ಕಾಗಿ ಅವರು ಮಪುಸಾ ಕೆ ಬಂದು ಅಲ್ಲಿಂದ ತಮ್ಮ ಊರುಗಳಿಗೆ ತೆರಳಲು ಬಸ್ ಏರಿದ್ದರು. ಆತಂಕಕಾರಿ ವಿಷಯವೆಂದರೆ ಈ ಒಂದೇ ಬಸ್ ನಲ್ಲಿ 140 ಜನ ವಲಸೆ ಕಾರ್ಮಿಕರನ್ನು ಕುರಿಗಳಂತೆ ತುಂಬಲಾಗಿತ್ತು.

ಇಷ್ಟೊಂದು ಅಪಾಯಕಾರಿಯಾಗಿ ಪ್ರಯಾಣ ನಡೆಸುವ ಈ ಕಾರ್ಮಿಕರಿಂದ ತಲಾ 4000. ರೂ ಪಡೆಯಲಾಗಿತ್ತು.

ಮಧ್ಯಪ್ರದೇಶದ ನೋಂದಾಯಿತ ಸಿಟರ್ ಕಮ್ ಸ್ಲೀಪರ್ ಬಸ್ ಕಳೆದ ನಾಲ್ಕು ವರ್ಷಗಳಿಂದ ಈ ಅಂತರಾಜ್ಯ ಮಾರ್ಗದಲ್ಲಿ ಓಡಾಟ ನಡೆಸುತ್ತಿದೆ. ಆದರೆ ಆತಂಕಕಾರಿ ವಿಷಯವೊಂದನ್ನು ಈ ಬಸ್ ಚಾಲಕ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. ಗೋವಾ ಗಡಿಯಲ್ಲಿ ಈ ಬಸ್ ಅನ್ನು ತಡೆದು ನಿಲ್ಲಿಸಿದಾಗ 30,000 ದಿಂದ 40,000ಗಳನ್ನು ಪಾವತಿಸಿ ಮುಂದೆ ಹೋಗುತ್ತಿದ್ದೆ ಎಂದು ಹೇಳಿದ್ದಾನೆ. ಇದರಿಂದಾಗಿ ಇಷ್ಟೊಂದು ಅಪಾಯಕಾರಿಯಾಗಿ ಪ್ರಯಾಣ ಪ್ರಯಾಣ ನಡೆಸುತ್ತಿದ್ದರು ಕೂಡ ಗೋವಾಗಡಿಯಲ್ಲಿ ಹಣ ಪಡೆದು ಅವರನ್ನು ಬಿಟ್ಟು ಬಿಟ್ಟು ಕಳಿಸಲಾಗುತ್ತಿತ್ತೆ…? ಎಂಬ ಆತಂಕಕಾರಿ ಪ್ರಶ್ನೆ ಕೂಡ ಮೂಡಿದೆ.

ನಿನ್ನೆ ಇದ್ದಕ್ಕಿದ್ದಂತೆ ಈ 140 ಜನ ಪ್ರಣಿಕರನ್ನು ಬಸ್ಸಿನಿಂದ ಕೆಳಕ್ಕೆ ಇಳಿಸಿದ ನಂತರ ಪ್ರಯಾಣಿಕರಲ್ಲರು ರಾತ್ರಿ ಇಡಿ ಊರಿಗೆ ತೆರಳಲಾಗದೆ ಅಲ್ಲಿಯೇ ಕುಳಿತಿದ್ದರು.